ಸೇಡಂ: ‘ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಸರ್ಕಾರ ಮಾಡುತ್ತಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಬಾಳಿಗೊಂದ ಬೆಳಕು ಪ್ರವಚನ ಮತ್ತು ಸೇಡಂ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೇಡಂ ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸವದತ್ತ ಚಥುಷ್ಪಥ ರಸ್ತೆ, ಸೇಡಂನಲ್ಲಿ ಈಜುಕೊಳ, ಒಳಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಸೇಡಂ ಉತ್ಸವ ಮಾಡಿ, ಸಾಧಕರನ್ನು ಸತ್ಕರಿಸುತ್ತಿರುವುದು ಅಭಿನಂದನೀಯ’ ಕೆಲಸ ಎಂದರು.
ಸರಡಗಿಯ ಶಕ್ತಿಪೀಠದ ಅಪ್ಪರಾವ ದೇವಿ ಮುತ್ಯಾ ಅವರು ಮಾತನಾಡಿದರು.
ಸಾಧಕರಿಗೆ ಸತ್ಕಾರ: ಗಿರಿಮಲ್ಲಪ್ಪ ಭಂಟನಳ್ಳಿ, ಜಗದೀಶ ಪುರಾಣಿಕ, ನೀಲಕಂಠ ಕುಕ್ಕುಂದಾ, ಬಸವರಾಜ ಪೊಲೀಸ್ ಪಾಟೀಲ ಮತ್ತು ಮಲ್ಲಮ್ಮ ಬಡಿಗೇರ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸೇಡಂ ಪುರಸಭೆಯಿಂದ ಮುಖ್ಯರಸ್ತೆ, ಚೌರಸ್ತಾ ಮಾರ್ಗದ ಮೂಲಕ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಮುಗುಳನಾಗಾಂವಿನ ಜೇಮ್ಸಿಂಗ ಮಹಾರಾಜ, ಗುಡೂರಿನ ಅನ್ನದಾನೇಶ್ವರ ಸ್ವಾಮೀಜಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ನಾಗರಿಕ ಸಮಿತಿ ಅಧ್ಯಕ್ಷ ಬಸವರಾಜ ರೇವಗೊಂಡ, ಸೇಡಮ್ ಪರಿವಾರ ಅದ್ಯಕ್ಷ ಅನಂತಯ್ಯ ಮುಸ್ತಾಜರ್, ಪತ್ರಕರ್ತ ಸಿದ್ದಲಿಂಗಯ್ಯಸ್ವಾಮಿ ಮಲಕೂಡ ಇದ್ದರು.
ಸೇಡಂ ಉತ್ಸವ ಸಮಿತಿ ಕಾರ್ಯದರ್ಶಿ ನಾಗೇಂದ್ರಪ್ಪ ಡೊಳ್ಳಾ ಪ್ರಾಸ್ತಾವಿಕ ಮಾತನಾಡಿದರು.
ಕಲಾವಿದ ವೀರೇಂದ್ರ ಭಂಟನಳ್ಳಿ ಪ್ರಾರ್ಥಿಸಿದರು, ಅಭಿಷೇಕ ವಿಶ್ವಕರ್ಮ ತಬಲಾ ಸಾತ್ ನೀಡಿದರು. ಶೃತಿ ಚರಂತಿಮಠ ಭರತನಾಟ್ಯ ಪ್ರದರ್ಶಿದರು. ಬಸವರಾಜ ರೇವಗೊಂಡ ಸ್ವಾಗತಿಸಿ, ಪ್ರದೀಪಕುಮಾರ ಪಾಟೀಲ ನಿರೂಪಿಸಿದರು. ಅನಂತಯ್ಯ ಮುಸ್ತಾಜರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.