ADVERTISEMENT

ಬಸ್‌ ಸಂಚಾರಕ್ಕೆ ಶೀಘ್ರ ಕ್ರಮ: ತಹಶೀಲ್ದಾರ್ ವರ್ಮಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:29 IST
Last Updated 20 ಮಾರ್ಚ್ 2022, 5:29 IST
ಕಮಲಾಪುರ ತಾಲ್ಲೂಕಿನ ಕುದಮೂಡ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮವಾಸ್ತವ್ಯದಲ್ಲಿ ತಹಶೀಲ್ದಾರ್ ಸುರೇಶ ವರ್ಮಾ ಪಿಂಚಣಿ ಆದೇಶ ಪ್ರತಿ ವಿತರಿಸಿದರು
ಕಮಲಾಪುರ ತಾಲ್ಲೂಕಿನ ಕುದಮೂಡ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮವಾಸ್ತವ್ಯದಲ್ಲಿ ತಹಶೀಲ್ದಾರ್ ಸುರೇಶ ವರ್ಮಾ ಪಿಂಚಣಿ ಆದೇಶ ಪ್ರತಿ ವಿತರಿಸಿದರು   

ಕಮಲಾಪುರ: ತಾಲ್ಲೂಕಿನ ಕುದಮೂಡಕ್ಕೆ ಬಸ್‌ ಸಂಚಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸುರೇಶ ವರ್ಮಾ ಭರವಸೆ ನೀಡಿದರು.

ತಾಲ್ಲೂಕಿನ ಕುದಮೂಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿ ಸಮಸ್ಯೆಗಳ ಕುರಿತು ಸಾರ್ವಜನಿಕರು ಮಾಹಿತಿ ಪಡೆದ ಅವರು ಶಾಲೆಯ ಕಂಪೌಂಡ್‌, ಶೌಚಾಲಯ, ರುದ್ರಭೂಮಿಗೆ ಕಂಪೌಂಡ್‌ ಕಾಮಗಾರಿಗಳನ್ನು ನರೇಗಾದಡಿ ಕೈಗೊಳ್ಳಬೇಕು. ಶಿಕ್ಷಕರ ಕೊರತೆ ನೀಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಗ್ರಾ.ಪಂ, ತಾ.ಪಂ ಅಧಿಕಾರಿಗಳು ಕಾರ್ಯಕೈಗೊಳ್ಳಬೇಕು ಎಂದು ತಿಳಿಸಿದರು.

ADVERTISEMENT

55 ಜನರಿಗೆ ಸ್ಥಳದಲ್ಲೆ ಪಿಂಚಣಿ ಆದೇಶ ಪ್ರತಿ ಒದಗಿಸಿದರು. ಉಳಿದ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಯಿತು ಎಂದು ಕಂದಾಯ ನಿರೀಕ್ಷಕ ಮಂಜುನಾಥ ಬಿರಾದಾರ ತಿಳಿಸಿದರು.

ಗ್ರೇಡ್‌ 2 ತಹಶೀಲ್ದಾರ್ ಗಂಗಾಧರ ಪಾಟೀಲ, ಕಂದಾಯ ನಿರೀಕ್ಷಕ ಮಂಜುನಾಥ ಬಿರಾದಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಸವಿತಾ, ಪಿಡಿಒ ಅಮಿತ, ಗ್ರಾ.ಪಂ ಅಧ್ಯಕ್ಷ ಯುವರಾಜ ಶಳಕೆ, ಸಿದ್ರಾಮಪ್ಪ ಕಟ್ಟಿಮನಿ, ನಿಸಾರ ಅಹಮ್ಮದ್‌, ಪವನ, ಶರಣು ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.