ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:56 IST
Last Updated 29 ಅಕ್ಟೋಬರ್ 2025, 6:56 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರಗಿ: 2025-26ನೇ ಶೈಕ್ಷಣಿಕ ಸಾಲಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಆಳಂದ ಸ್ನಾತಕೋತ್ತರ ಕೇಂದ್ರದಲ್ಲಿ ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ/ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ (ಕಾರ್ಯಬಾಹುಳ್ಯಕ್ಕೆ ಅನುಗುಣವಾಗಿ) ಅರ್ಜಿ ಆಹ್ವಾನಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ. 
   
ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿನ ಸ್ನಾತಕೋತ್ತರ ವಿಭಾಗಗಳಾದ ಸಸ್ಯಶಾಸ್ತ್ರ, ಜೀವರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ (ಫಿಜಿಕಲ್ ಕೆಮಿಸ್ಟ್ರಿ, ಇನ್‍ಆರ್ಗನಿಕ್ ಕೆಮಿಸ್ಟ್ರಿ, ಆರ್ಗನೆಕ್ ಕೆಮಿಸ್ಟ್ರಿ ಮತ್ತು ಅನಾಲೆಟಿಕಲ್ ಕೆಮಿಸ್ಟ್ರಿ), ಸೂಕ್ಷ್ಮ ಜೀವಶಾಸ್ತ್ರ, ಗಣಕ ವಿಜ್ಞಾನ (ಎಂಸಿಎ, ಎಂ.ಎಸ್ಸಿ ಗಣಕ ವಿಜ್ಞಾನ), ಸಂಖ್ಯಾಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಮಾಜಕಾರ್ಯ, ಸಮಾಜಶಾಸ್ತ್ರ, ಮನೋವಿಜ್ಞಾನ, ರಾಜ್ಯಶಾಸ್ತ್ರ, ಕನ್ನಡ, ಪಾಲಿ ಮತ್ತು ಬೌದ್ಧ ಅಧ್ಯಯನ, ಇಂಗ್ಲೀಷ, ಮರಾಠಿ, ಸಂಗೀತ, ಹಿಂದಿ, ಸಂಸ್ಕೃತ, ಉರ್ದು ಮತ್ತು ಪರ್ಶಿಯನ್, ದೃಶ್ಯಕಲಾ (ಎಂವಿಎ, ಪೇಂಟಿಂಗ್, ಎಂವಿಎ ಸ್ಕಲ್ಪಚರ್), ನಿರ್ವಹಣಾಶಾಸ್ತ್ರ, ವಾಣಿಜ್ಯ ಎಂ.ಕಾಂ, ಶಿಕ್ಷಣ ಮತ್ತು ಕಾನೂನು  ಹಾಗೂ ಆಳಂದ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ, ಗಣಕ ವಿಜ್ಞಾನ, ಗಣಿತ, ಇಂಗ್ಲೀಷ ಹಾಗೂ ಕನ್ನಡ ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ನ.7 ಕೊನೆಯ ದಿನವಾಗಿದೆ. ನ.14 ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆ ಸಲ್ಲಿಕೆಗೆ ನ.17 ಕೊನೆ ದಿನ, 18 ರಂದು ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. 24 ರಿಂದ ಸಂದರ್ಶನ ಪ್ರಾರಂಭವಾಗಲಿದೆ.

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹600, ಪ.ಜಾ./ಪ.ಪಂ, ಪ್ರವರ್ಗ-1 ಅಭ್ಯರ್ಥಿಗಳಿಗೆ ₹300  ನಿಗದಿಪಡಿಸಲಾಗಿದೆ. ವಿವಿಧ ವಿಭಾಗಗಳ ವಿವರ ಹಾಗೂ ನಿಗದಿತ ಅರ್ಜಿಯನ್ನು ವಿಶ್ವವಿದ್ಯಾಲಯದ www.gug.ac.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ, ನಿಗದಿತ ಶುಲ್ಕ ಮತ್ತು ಶೈಕ್ಷಣಿಕ ಅರ್ಹತೆ, ಅನುಭವದ ವಿವರ, ಜಾತಿ, ವರ್ಗ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. 

ADVERTISEMENT

ಸಂದರ್ಶನದ ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಕಲಬುರಗಿಯ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿನ ವಿಭಾಗದ ಮುಖ್ಯಸ್ಥರ ಕಚೇರಿಗೆ ಖುದ್ದಾಗಿ/ ರಜಿಸ್ಟರ್ಡ್ ಅಂಚೆ ಮೂಲಕ ನ.7ರ ಒಳಗೆ ತಲುಪುವಂತೆ ಸಲ್ಲಿಸಬೇಕು. ಅಪೂರ್ಣವಾದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.