ADVERTISEMENT

ಗುಲಬರ್ಗಾ ವಿವಿ: ‘ಭಾವಶಿಲ್ಪ’ಗಳ ಮೋಡಿ

ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ಸಹಯೋಗದ 10 ದಿನಗಳ ಶಿಬಿರ ಸಮಾರೋಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 15:59 IST
Last Updated 30 ಆಗಸ್ಟ್ 2018, 15:59 IST
ಭಾವಶಿಲ್ಪಗಳನ್ನು ವಿದ್ಯಾರ್ಥಿನಿಯರು ಕುತೂಹಲದಿಂದ ವೀಕ್ಷಿಸಿದರು
ಭಾವಶಿಲ್ಪಗಳನ್ನು ವಿದ್ಯಾರ್ಥಿನಿಯರು ಕುತೂಹಲದಿಂದ ವೀಕ್ಷಿಸಿದರು   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಮಹಾತ್ಮರ ಭಾವಶಿಲ್ಪಗಳುಕಣ್ಮನ ಸೆಳೆಯುತ್ತಿವೆ.

ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ‘ಭಾವ ಶಿಲ್ಪ ಕಲಾ ಶಿಬಿರ’ವನ್ನು ಆಯೋಜಿಸಲಾಗಿತ್ತು.

ಕಲಾವಿದರು ಫೈಬರ್‌ ಅನ್ನೇಮಾಧ್ಯಮವಾಗಿ ಬಳಸಿ ಡಾ.ಬಿಆರ್‌. ಅಂಬೇಡ್ಕರ್‌, ಬುದ್ಧ, ಬಸವ,ಕನಕದಾಸ, ಪೆರಿಯಾರ್, ಸಾವಿತ್ರಿಬಾಯಿ ಫುಲೆ, ಕುವೆಂಪು, ಡಾ.ದ.ರಾ.ಬೇಂದ್ರೆ,ಎಸ್‌.ಎಂ.ಪಂಡಿತ್‌ ಅವರ ಭಾವಶಿಲ್ಪಗಳನ್ನು ರಚಿಸಿದ್ದಾರೆ.

ADVERTISEMENT

ಶಿವಮೊಗ್ಗದ ವಿಶಾಲ ಕೆ.,ಕಲಬುರ್ಗಿಯ ಜಗನ್ನಾಥ ಜಕ್ಕೇಪಳ್ಳಿ, ಮಹೇಶಕುಮಾರ್‌ ಡಿ.ತಳವಾರ, ಮೈಸೂರಿನ ರಾಘವೇಂದ್ರ ಕೆ., ದೇವಣ್ಣ, ಚಿತ್ರದುರ್ಗದ ಮುರಳೀಧರ ಆಚಾರ್ಯ ಎಚ್., ಶಿವಮೊಗ್ಗದ ನಾಗರಾಜ್, ಬೆಂಗಳೂರಿನ ವೆಂಕಟೇಶ್‌ಎಂ., ಸೋಮಶೇಖರ ಎಂ.ಜೆ. ಹಾಗೂ ಜಿ.ಬಿ. ಓಂಕಾರಮೂರ್ತಿ ಶಿಬಿರದಲ್ಲಿ ಭಾಗವಹಿಸಿದ್ದರು.

‘ಇದು ಬಸವಣ್ಣನ ನಾಡು. ಅವರ ವಚನಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಹಾಗಾಗಿ, ಬಸವಣ್ಣನವರಭಾವಶಿಲ್ಪ ರಚಿಸಿದ್ದೇನೆ’ ಎಂದು ರಾಘವೇಂದ್ರ ಕೆ. ಹೇಳಿದರು.

ಸಮಾರೋಪ: ಸಮಾರೋಪ ಸಮಾರಂಭ ಗುರುವಾರ ಜರುಗಿತು. ಹಿರಿಯ ಕಲಾವಿದ ಡಾ.ಜೆ.ಎಸ್‌.ಖಂಡೇರಾವ್‌ ಶಿಲ್ಪಗಳನ್ನು ಲೋಕಾರ್ಪಣೆ ಮಾಡಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ರು.ಕಾಳಾಚಾರ್‌ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ, ಅಕಾಡೆಮಿಯ ರಿಜಿಸ್ಟ್ರಾರ್‌ ಇಂದ್ರಮ್ಮ ಎಚ್‌.ವಿ., ಸದಸ್ಯ ಸಂಚಾಲಕ ನಿಂಗಪ್ಪ ಡಿ.ಕೇರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.