ADVERTISEMENT

ಗುಲಬರ್ಗಾ ವಿಮಾನ ನಿಲ್ದಾಣದಿಂದ ಖರ್ಗೆ ಮೊದಲ ಬಾರಿಗೆ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 8:59 IST
Last Updated 24 ಅಕ್ಟೋಬರ್ 2018, 8:59 IST
ಗುಲಬರ್ಗಾ ವಿಮಾನ ನಿಲ್ದಾಣದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಜನರತ್ತ ಕೈಬೀಸಿದರು
ಗುಲಬರ್ಗಾ ವಿಮಾನ ನಿಲ್ದಾಣದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಜನರತ್ತ ಕೈಬೀಸಿದರು   

ಕಲಬುರ್ಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಗುಲಬರ್ಗಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಲಾತೂರ್ ವಿಮಾನ ನಿಲ್ದಾಣಕ್ಕೆ ಬುಧವಾರ ವಿಶೇಷ ವಿಮಾನದ ಮೂಲಕ ಮೊದಲ ಬಾರಿಗೆ ಪ್ರಯಾಣ ಕೈಗೊಂಡರು.

ವಿಮಾನಗಳ ಪ್ರಾಯೋಗಿಕ ಹಾರಾಟ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಬಂದಿಳಿದಿರುವುದನ್ನು ಹೊರತು ಪಡಿಸಿದರೆ, ಕಲಬುರ್ಗಿಯಿಂದ ಮೊದಲ ಬಾರಿಗೆ ವಿಮಾನಯಾನ ಕೈಗೊಂಡ ಕೀರ್ತಿಗೆ ಖರ್ಗೆ ಪಾತ್ರರಾದರು.

‘ಮುಂಬೈನ ಖಾಸಗಿ ಕಂಪನಿಯ ವಿಮಾನದಲ್ಲಿ ಖರ್ಗೆ ಮಹಾರಾಷ್ಟ್ರದ ಲಾತೂರ್‌ಗೆ ತೆರಳಿದ್ದಾರೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ADVERTISEMENT

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಜಿ.ರಾಮಕೃಷ್ಣ ಇದ್ದರು.

ವಿಮಾನ ಹಾರಾಟ ಹಿನ್ನೆಲೆ: ಆಗಸ್ಟ್ 26ರಂದು ಗುಲಬರ್ಗಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ ನಡೆದಿತ್ತು. ಮೊಟ್ಟಮೊದಲ ಬಾರಿಗೆ ನಗರದ ನೆಲ ಸ್ಪರ್ಶಿಸಿದ ಉಕ್ಕಿನ ಹಕ್ಕಿಗಳನ್ನು ಕಂಡ ಜನರು ಹರ್ಷಗೊಂಡಿದ್ದರು.

ಇದಾದ ಬಳಿಕ, ಅಂದರೆ ಸೆಪ್ಟೆಂಬರ್ 17ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊಟ್ಟ ಮೊದಲ ಬಾರಿಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಇಲ್ಲಿಗೆ ಬಂದಿಳಿದಿದ್ದರು. ಅಲ್ಲದೆ, ಗುಲಬರ್ಗಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.