ADVERTISEMENT

ವಾಡಿ: ಭಾವೈಕ್ಯತೆಯ ಹನುಮ ಜಯಂತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 3:03 IST
Last Updated 17 ಏಪ್ರಿಲ್ 2022, 3:03 IST
ವಾಡಿಯಲ್ಲಿ ರಾಮ ಹಾಗೂ ಹನುಮ ಜಯಂತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿದರು. ಸೈಯ್ಯದ್ ಮಹೇಮೂದ್ ಸಾಹೇಬ ಇದ್ದರು
ವಾಡಿಯಲ್ಲಿ ರಾಮ ಹಾಗೂ ಹನುಮ ಜಯಂತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿದರು. ಸೈಯ್ಯದ್ ಮಹೇಮೂದ್ ಸಾಹೇಬ ಇದ್ದರು   

ವಾಡಿ: ‘ದೇಶದಲ್ಲಿ ಕಳೆದ 60 ವರ್ಷಗಳಿಂದ ಆಡಳಿತ ನಡೆಸಿರುವ ಕಾಂಗ್ರೆಸ್‌ ಮುಸ್ಲಿಂರ ಓಲೈಕೆ ರಾಜಕಾರಣ ಮಾಡುತ್ತಾ ಬಂದಿದ್ದರಿಂದ ಹಿಂದೂ ಮುಸ್ಲಿಂ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಮುಸ್ಲಿಂ ಮಧ್ಯೆ ಸೌಹಾರ್ದತೆ ಹೆಚ್ಚಾಗಿದೆ’ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲದ ಸಿದ್ದಲಿಂಗ ಸ್ವಾಮಿ ಹೇಳಿದರು.

ಸ್ಥಳೀಯ ಶ್ರೀರಾಮ ಸೇನೆ ವತಿಯಿಂದ ಪಟ್ಟಣದಲ್ಲಿ ಶನಿವಾರ ಜರುಗಿದ ಶ್ರೀರಾಮ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದ ಅವರು, ನನ್ನ ಬರುವಿಕೆ ತಡೆಯಲು ಕೆಲವು ಸಂಘಟನೆಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಿಜಕ್ಕೂ ಅಚ್ಚರಿ ತಂದಿದೆ. ಹಿಂದೂ ಮುಸ್ಲಿಂರು ಸೇರಿ ಇಲ್ಲಿರಾಮ ಹನುಮ ಉತ್ಸವ ಹಬ್ಬ ಆಚರಿಸುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ. ಧರ್ಮಗಳ ಮಧ್ಯೆ ಕೋಮು ಸೌಹಾರ್ದತೆ ಇರಬೇಕು ಎಂದು ಬಯಸುವ ವ್ಯಕ್ತಿ ನಾನಾಗಿದ್ದೇವೆ ಎಂದರು.

ಹಲಕರ್ಟಿ ಸಿದ್ದೇಶ್ವರ ಧ್ಯಾನಧಾಮದ ರಾಜಶೇಖರ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸೈಯ್ಯದ್ ಮಹೆಮೂದ್ ಸಾಹೇಬ, ವಿಠ್ಠಲ ನಾಯಕ, ಅರವಿಂದ ಚವ್ಹಾಣ, ಮಣಿಕಂಠ ರಾಠೋಡ, ವೀರಣ್ಣ ಯಾರಿ, ಶಿವರಾಂ ಪವಾರ, ರಾಹುಲ ಸಿಂದಗಿ, ರಾಜು ಮುಕ್ಕಣ್ಣ, ರವಿ ನಾಯಕ, ಮಹ್ಮದ್ ಇಕ್ಬಾಲ, ರವಿ ಕಾರಬಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಲೋಕೇಶ ರಾಠೋಡ, ಕಿಶಾನ ಜಾಧವ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.