ಕಲಬುರಗಿ: ‘ವೈದ್ಯರು ಬಡವರ ಆರೋಗ್ಯ ಸೇವೆ ಮಾಡಿ ದೇವರನ್ನು ಕಾಣಬೇಕು. ರೋಗಿಗಳಿಗೆ ವೈದ್ಯರೇ ನಡೆದಾಡುವ ದೇವರು’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ನಗರದ ಜವಳಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಹರಿದಾಸ ಹಾರ್ಟ್ ಹಾಸ್ಪಿಟಲ್ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲ್ಯಾಣ ಭಾಗದಲ್ಲಿ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಚಿಕಿತ್ಸೆಗಾಗಿ ಸೋಲಾಪುರ, ಬೆಂಗಳೂರಿಗೆ ತೆರಳಬೇಕಿತ್ತು. ಆ ಯುಗಕ್ಕೆ ಅಂತ್ಯ ಹಾಡಲು ತಜ್ಞ ವೈದ್ಯರು ಕಲಬುರಗಿಯಲ್ಲೇ ಆಸ್ಪತ್ರೆ ಪ್ರಾರಂಭಿಸಿ, ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದರು.
ಉದ್ಯಮಿ ರಾಘವೇಂದ್ರ ಮೈಲಾಪುರ ಮಾತನಾಡಿ, ‘ಕಲಬುರಗಿಯಲ್ಲಿ ಹೃದ್ರೋಗ ಆಸ್ಪತ್ರೆ ಪ್ರಾರಂಭವಾಗಿರುವುದು ಹೆಮ್ಮೆಯ ಸಂಗತಿ. ಡಾ.ಅರುಣಕುಮಾರ ಹರಿದಾಸ್ ಶ್ರೇಷ್ಠ ವೈದ್ಯರಾಗಿದ್ದು, ಅವರ ಸೇವೆ ಈ ಭಾಗಕ್ಕೆ ದೊಡ್ಡ ಕೊಡುಗೆ: ಎಂದರು.
ಎಚ್‌ಕೆಇ ಆಡಳಿತ ಮಂಡಳಿ ಮಾಜಿ ಸದಸ್ಯ ನಿತಿನ್ ಬಿ.ಜವಳಿ ಮಾತನಾಡಿದರು. ಉದ್ಯಮಿಗಳಾದ ವೆಂಕಟೇಶ ಕಡೇಚೂರ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಮಾಜಿ ಉಪಮೇಯರ್ ನಾಗವೇಣಿ ಕಮಕನೂರು ಇದ್ದರು.
ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ.ಕೆ., ಡಾ.ರಾಜೇಶ ಕಡೇಚೂರ, ಕೋಮಲೇಶ್ವರಿ ಅರುಣಕುಮಾರ, ಜಾದುಗಾರ ಕುದ್ರೋಳಿ ಗಣೇಶ ಇದ್ದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.