ADVERTISEMENT

ಕಲಬುರಗಿ: ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:15 IST
Last Updated 29 ಜನವರಿ 2026, 5:15 IST
ಕಲಬುರಗಿಯ ವಿಶ್ವ ಮಧ್ವ ಮಹಾಪರಿಷತ್‌ ವತಿಯಿಂದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ರಜತ ಮಹೋತ್ಸವದ ಅಂಗವಾಗಿ ಎಸ್‌.ವಿ.ಪಿ ವೃತ್ತದಿಂದ ಬುಧವಾರ ಶೋಭಾಯಾತ್ರೆ ನಡೆಯಿತು       ಪ್ರಜಾವಾಣಿ ಚಿತ್ರ
ಕಲಬುರಗಿಯ ವಿಶ್ವ ಮಧ್ವ ಮಹಾಪರಿಷತ್‌ ವತಿಯಿಂದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ರಜತ ಮಹೋತ್ಸವದ ಅಂಗವಾಗಿ ಎಸ್‌.ವಿ.ಪಿ ವೃತ್ತದಿಂದ ಬುಧವಾರ ಶೋಭಾಯಾತ್ರೆ ನಡೆಯಿತು       ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರದ ವಿಶ್ವಮಧ್ವ ಮಹಾಪರಿಷತ್‌ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಉತ್ತರಾದಿಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳನ್ನು ಬುಧವಾರ ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.

ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಆರಂಭವಾದ ದಾಸರ ಚಿತ್ರಗಳ ಮೆರವಣಿಗೆ  ಬ್ರಹ್ಮಪುರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದವರೆಗೂ ಸಾಗಿತು.

ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಹರಿದಾಸ ಸಾಹಿತ್ಯಪ್ರಚಾರ ವಾಹಿನಿಯ ಅಧ್ಯಕ್ಷ ಪಂ. ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯಕ್ಷ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕ ಬೆಂಕಿ ಭೀಮಣ್ಣ ಮೋತಕಪಲ್ಲಿ, ಪಂ. ವಿನೋದಾಚಾರ್ಯ ಗಲಗಲಿ, ಪಂ ಭೀಮಸೇನಾಚಾರ್ಯ ಜೋಶಿ, ಪಂ. ಅಭಯಾಚಾರ್ಯ ಪಾಟೀಲ, ಪಂ. ಗುರುಮಧ್ವಾಚಾರ್ಯ ನವಲಿ, ಪಂ. ಹಣಮಂತಾಚಾರ್ಯ ಸರಡಗಿ ಹಾಗೂ ನಗರದ ವಿವಿಧ ಮಹಿಳಾ ಭಜನಾಮಂಡಳಿಗಳ ಸದಸ್ಯೆಯರು ಪಾಲ್ಗೊಂಡಿದ್ದರು.

ADVERTISEMENT

ಮಹಿಳೆಯರು ಕೋಲಾಟ, ಗೋವಿಂದ ನಾಮಾವಳಿ ಪಠಿಸುತ್ತ ಶೋಭಾಯಾತ್ರೆಯಲ್ಲಿ ಸಾಗಿದ್ದು ಗಮನ ಸೆಳೆಯಿತು. ಸತ್ಯಾತ್ಮ ತೀರ್ಥರು ಐದು ದಿನಗಳ ಕಾಲ ಕಲಬುರಗಿ ನಗರದಲ್ಲಿ ತಂಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.