ADVERTISEMENT

‘ಉತ್ತಮ ಆರೋಗ್ಯಕ್ಕೆ ಮುಂಜಾಗ್ರತೆಯೇ ಸಂಜೀವಿನಿ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:03 IST
Last Updated 9 ಆಗಸ್ಟ್ 2024, 16:03 IST
ಕಲಬುರಗಿ ನಗರದ ಗಾಜಿಪುರದ ಅತ್ತರ ಕಾಂಪೌಂಡ್‍ನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ಕಲಬುರಗಿ ನಗರದ ಗಾಜಿಪುರದ ಅತ್ತರ ಕಾಂಪೌಂಡ್‍ನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು   

ಕಲಬುರಗಿ: ‘ಉತ್ತಮ ಆರೋಗ್ಯಕ್ಕೆ ಮುಂಜಾಗ್ರತೆಯೇ ಸಂಜೀವಿನಿ’ ಎಂದು ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಅಭಿಪ್ರಾಯಪಟ್ಟರು.

ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರ, ಮಲ್ಲೇಶಪ್ಪ ಮಿಣಜಗಿ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಗಾಜಿಪುರದ ಅತ್ತರ ಕಾಂಪೌಂಡ್‍ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಗರ್ಭಿಣಿಯರು ಪೌಷ್ಟಿಕ ಆಹಾರ, ಐರನ್ ಮತ್ತು ಕ್ಯಾಲ್ಸಿಯಂ ಮಾತ್ರೆ ಕಡ್ಡಾಯವಾಗಿ ಸೇವಿಸಬೇಕು. ನಿಯಮಿತವಾಗಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಡಾ.ಅಲ್ಲಮಪ್ರಭು ಗುಡ್ಡಾ, ಆಸ್ಪತ್ರೆ ಅಧೀಕ್ಷಕಿ ಡಾ.ವಿಜಯಲಕ್ಷ್ಮೀ ಹರನೂರಕರ್, ಡಾ.ರಾಮರಾವ ದೇಶಮುಖ ಸೇರಿ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.