ADVERTISEMENT

ಕೃತಕ ಕೈಕಾಲು ಜೋಡಣೆಗೆ ಅಳತೆ ತಪಾಸಣೆ ಶಿಬಿರ 13ರಂದು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 9:27 IST
Last Updated 9 ಫೆಬ್ರುವರಿ 2022, 9:27 IST

ಕಲಬುರಗಿ: ಸೇಡಂನ ಉಡಗಿ ರಸ್ತೆಯ‌ಲ್ಲಿನ ಲಯನ್ಸ್‌ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಫೆಬ್ರುವರಿ 13ರಂದು ಬೆಳಿಗ್ಗೆ 9.30ರಿಂದ ಸಂಜೆ 4 ರವರೆಗೆ ಕೃತಕ ಕೈಕಾಲು ಜೋಡಣೆಗೆ ಅಳತೆ ತಪಾಸಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ. ಜಿಲ್ಲೆ ಮಾತ್ರವಲ್ಲದೆ, ಯಾದಗಿರಿ, ಬೀದರ್ ಜಿಲ್ಲೆಗಳ ಅಂಗವಿಕಲರೂ ಇದರ ಲಾಭ ಪಡೆಯಬಹುದು ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಯಾ ತಿಳಿಸಿದರು.

ಪುಣೆಯ ಸಾಧು ವಾಸವಾನಿ ಮಿಷನ್‌, ಬೆಂಗಳೂರಿನ ಕರ್ನಾಟಕ ಪ್ರಾಂತೀಯ ಮಾರ್ವಾರಿ ಯುವ ವೇದಿಕೆ, ಸೇಡಂನ ಲಯನ್ಸ್‌ ಕ್ಲಬ್ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಶಿಬಿರ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಶಿಬಿರದಲ್ಲಿ ತಪಾಸಣೆಗೊಳಪಡಲು ಈಗಾಗಲೇ 150 ಅಂಗವಿಕಲರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕನಿಷ್ಠ 250 ಜನರಿಗೆ ತಪಾಸಣೆ ನಡೆಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಪುಣೆಯಿಂದ 12 ವೈದ್ಯರು ಬರುತ್ತಿದ್ದಾರೆ. ತಪಾಸಣಾ ಶಿಬಿರದಲ್ಲಿ ಆಯ್ಕೆಯಾದ ಅಂಗವಿಕಲರಿಗೆ 5ರಿಂದ 6 ವಾರಗಳಲ್ಲಿ ಕೃತಕ ಕೈಕಾಲುಗಳನ್ನು ಉಚಿತವಾಗಿ ಜೋಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿ, ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್‌ ಜೆರಾಕ್ಸ್‌ ಪ್ರತಿ ತರಬೇಕು. ಅಂಗವಿಕಲರಿಗೆ ಉಪಾಹಾರ, ಊಟದ ವ್ಯವಸ್ಥೆಯೂ ಇರಲಿದೆ. ಆಸಕ್ತರು ದೂರವಾಣಿ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ.ಸದಾನಂದ ಬೂದಿ (9008336099), ಸಿದ್ದಪ್ಪ ತಳ್ಳಳ್ಳಿ (9448104581) ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಖಜಾಂಚಿ ಭಾಗ್ಯಲಕ್ಷ್ಮಿ ಎಂ., ಪ್ರಮುಖರಾದ ದತ್ತು ಅಗರವಾಲ, ವಿಶ್ವನಾಥ ಕೂರವಾರ, ಧನರಾಜ ಭಾಸಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.