ADVERTISEMENT

ಕಲಬುರ್ಗಿಯಲ್ಲಿ ಬಿರುಗಾಳಿ ಸಹಿತ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 31 ಮೇ 2020, 16:26 IST
Last Updated 31 ಮೇ 2020, 16:26 IST
ಕಲಬುರ್ಗಿಯಲ್ಲಿ ಅರ್ಧಗಂಟೆಗೂ ಅಧಿಕ ‌ಕಾಲ ಬಿರುಗಾಳಿ ಸಹಿತ ಮಳೆ ಸುರಿಯಿತು
ಕಲಬುರ್ಗಿಯಲ್ಲಿ ಅರ್ಧಗಂಟೆಗೂ ಅಧಿಕ ‌ಕಾಲ ಬಿರುಗಾಳಿ ಸಹಿತ ಮಳೆ ಸುರಿಯಿತು   

ಕಲಬುರ್ಗಿ: ಹಲವು ದಿನಗಳ ಬಳಿಕ ನಗರಲ್ಲಿ ಭಾನುವಾರ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಬಿರುಗಾಳಿ ಸಹಿತ ಮಳೆಯಾಯಿತು.

ಬೆಳಿಗ್ಗೆಯಿಂದ ಸೆಖೆಯ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆಯೇ ಏಕಾಏಕಿ ಬಿರುಗಾಳಿ ಬೀಸಲಾರಂಭಿಸಿತು. ಇದರಿಂದಾಗಿ ಹಲವು ಮರಗಳು ರೆಂಬೆ ಕೊಂಬೆಗಳು ಮುರಿದು ಬಿದ್ದವು. ಭಾನುವಾರ ರಜಾ ದಿನವಾದ್ದರಿಂದ ರಸ್ತೆಯಲ್ಲಿ ಜನಗಳ ಸಂಚಾರವೂ ಕಡಿಮೆ ಇತ್ತು. ಅಗತ್ಯ ಕೆಲಸಗಳಿಗಾಗಿ ಹೊರಗೆ ಬರುವಾಗ ಕೊಡೆ ಜೆರ್ಕಿನ್ ಮರೆತು ಬಂದಿದ್ದರಿಂದ ತೋಯಿಸಿಕೊಂಡು ಮನೆಯತ್ತ ಸಾಗಿದರು.

ಎಸ್‌ವಿಪಿ ವೃತ್ತ, ರೈಲ್ವೆ ನಿಲ್ದಾಣ, ಅನ್ನಪೂರ್ಣ ಕ್ರಾಸ್, ಜಗತ್ ಸರ್ಕಲ್‌ನಲ್ಲಿ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ನೀರು ಹರಿಯಿತು.

ADVERTISEMENT

ಮುಂಗಾರು ಹಂಗಾಮಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅಗತ್ಯವಾದ ರೋಹಿಣಿ ಮಳೆಯು ಬರುತ್ತಿರುವುದರಿಂದ ರೈತರು ಹರ್ಷಚಿತ್ತರಾಗಿದ್ದು, ನೇಗಿಲಿನೊಂದಿಗೆ ಹೊಲಕ್ಕೆ ತೆರಳಿ ಬಿತ್ತನೆಗೆ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದಾರೆ.

ನಗರದಲ್ಲಿ 34 ಮಿ.ಮೀ. ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.