ADVERTISEMENT

ಕಲಬುರ್ಗಿ: ಭೀಮಾ ನದಿಗೆ 2.25 ಲಕ್ಷ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 10:50 IST
Last Updated 6 ಆಗಸ್ಟ್ 2019, 10:50 IST
ಮಹಾರಾಷ್ಟ್ರದಿಂದ ನೀರು ಬಿಡುತ್ತಿರುವುದರಿಂದ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್ ಭರ್ತಿಯಾಗುತ್ತಿರುವುದು (ಪ್ರಜಾವಾಣಿ ಸಂಗ್ರಹ ಚಿತ್ರ)
ಮಹಾರಾಷ್ಟ್ರದಿಂದ ನೀರು ಬಿಡುತ್ತಿರುವುದರಿಂದ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್ ಭರ್ತಿಯಾಗುತ್ತಿರುವುದು (ಪ್ರಜಾವಾಣಿ ಸಂಗ್ರಹ ಚಿತ್ರ)    

ಕಲಬುರ್ಗಿ: ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಅಣೆಕಟ್ಟೆಯಿಂದ ಒಟ್ಟು 2.25 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ನೀರು ಪ್ರಸ್ತುತ ‌ಪಂಢರಾಪುರ ತಲುಪಿದೆ. ರಾತ್ರಿ ವೇಳೆಗೆ ಕಲಬುರ್ಗಿ ಜಿಲ್ಲೆಯ ‌ಗಡಿ ತಲುಪಲಿದೆ.

ಈಗಾಗಲೇ ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜಿನಲ್ಲಿ‌ 2 ಟಿಎಂಸಿ ಅಡಿ ನೀರು ‌ಸಂಗ್ರಹವಾಗಿದೆ. ಇದರ ಸಂಗ್ರಹ ಸಾಮರ್ಥ್ಯ 3.16 ಟಿಎಂಸಿ ಅಡಿ. ಹೆಚ್ಚುವರಿ ‌ನೀರು ತಲುಪುತ್ತಿದ್ದಂತೆಯೇ ಬ್ಯಾರೇಜಿನಿಂದ ನೀರು ಬಿಡುಗಡೆ ‌ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಭೀಮಾ ಏತ ನೀರಾವರಿ ‌ಯೋಜನೆ ಅಫಜಲಪುರ ಉಪವಿಭಾಗದ ಕಾರ್ಯನಿರ್ವಾಹಕ ‌ಎಂಜಿನಿಯರ್ ಮಲ್ಲಿಕಾರ್ಜುನ ‌ಮಾಕಾ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT