
ಕಲಬುರಗಿ: ನಗರದ ಎಚ್‌ಕೆಇ ಸೊಸೈಟಿ ಅಧೀನದ ಶೇಠ್ ಶಂಕರ್‌ಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಕಾನೂನು ಕಾಲೇಜು, ಸಂಘ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಸಹಯೋಗದಲ್ಲಿ ಅಧ್ಯಾಪಕರ ಸಂವಹನ ಕಾರ್ಯಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರು ಭಾನುವಾರ ಚಾಲನೆ ನೀಡಿದರು.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಮಹಿಳೆಯರ ಆಸ್ತಿ ಹಕ್ಕುಗಳು ಕುರಿತು ಮಾತನಾಡಿದ ನ್ಯಾ. ನಟರಾಜ್ ಅವರು, ಸಾಮಾಜಿಕವಾಗಿ ಜವಾಬ್ದಾರಿಯುತ ಕಾನೂನು ಶಿಕ್ಷಣವನ್ನು ಬಲಪಡಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಆನುವಂಶಿಕತೆಯನ್ನು ಒತ್ತಿ ಹೇಳಿದರು.
ಹಿರಿಯ ವಕೀಲ ಅಮಿತ್‌ಕುಮಾರ್ ದೇಶಪಾಂಡೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಚಾರ್ಯೆ ಮಹೇಶ್ವರಿ ಹಿರೇಮಠ ಸ್ವಾಗತಿಸಿದರು. ವೈಷ್ಣವಿ ಕೋರಿ ನಿರೂಪಿಸಿದರು. ಕಾಲೇಜಿನ ಜ್ಯೋತಿ ಕಡಾಡಿ, ಜ್ಯೋತಿ ಹಂಗರಗಿ, ಶರಣಬಸಪ್ಪ ಪಾಟೀಲ, ಹೈಕೋರ್ಟ್‌ನ ರಿಜಿಸ್ಟ್ರಾರ್ ಬಸವರಾಜ ಚೆಂಗಟಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.