ADVERTISEMENT

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 13:54 IST
Last Updated 18 ಏಪ್ರಿಲ್ 2025, 13:54 IST
ಶಹಾಬಾದ್‌ನ ಶ್ರೀ ಚನ್ನಪ್ಪ ಇಂಗಿನಶೆಟ್ಟಿ ಪದವಿ ಪೂರ್ವ ಕಾಲೇಜಿನ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಿಲಾಯಿತು
ಶಹಾಬಾದ್‌ನ ಶ್ರೀ ಚನ್ನಪ್ಪ ಇಂಗಿನಶೆಟ್ಟಿ ಪದವಿ ಪೂರ್ವ ಕಾಲೇಜಿನ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಿಲಾಯಿತು   

ಶಹಾಬಾದ್: ನಗರದ ರಾಷ್ಟ್ರೀಯ ಭಾಷೆ ಶಿಕ್ಷಣ ಸಮಿತಿಯ ಶ್ರೀ ಚನ್ನಪ್ಪ ಇಂಗಿನಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ರಾಜಗೋಪಾಲ್ ಜುಜಾರೆ ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಬನಸೋಡೆ 532, ಪಾರ್ವತಿ ಶ್ರೀನಿವಾಸ್ 505, ಜ್ಯೋತಿ 491 ಅಂಕ ಪಡೆದಿದ್ದಾರೆ. ಹಾಗೂ ವಾಣಿಜ್ಯ ವಿಭಾಗದಲ್ಲಿ ಬಸ್ಸಮ್ಮ 525, ಹಾಜಿಕರೀಂ 497, ಹಾಗೂ ಗೀತಾ 466 ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದರು.

ADVERTISEMENT

ಸಂಸ್ಥೆಯ ಕಾರ್ಯದರ್ಶಿ ದಿಲೀಪ ಯಲಶೆಟ್ಟಿ ಹಾಗೂ ಸದಸ್ಯರಾದ ಅಶೋಕ ಸೋಮಯಾಜಿ ಅವರು ಸನ್ಮಾನಿಸಿದರು. ಉಪನ್ಯಾಸಕರಾದ ಪ್ರಕಾಶ ಕೊಸಗಿ, ಪದ್ಮಶ್ರೀ ಜೋಶಿ, ಸಾಬಣ್ಣ ಗುಡ್ಲಾ, ಶರಣಪ್ಪ, ಪ್ರವೀಣ್ ರಾಜನ್, ವೀರಯ್ಯ ಹಿರೇಮಠ, ರಮೇಶ ಮಹೇಂದ್ರಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.