ADVERTISEMENT

ಗುಲಬರ್ಗಾ ವಿವಿ ಹಾಸ್ಟೆಲ್ ಆಹಾರದಲ್ಲಿ ಹುಳು‌ ಆರೋಪ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 6:39 IST
Last Updated 27 ಆಗಸ್ಟ್ 2025, 6:39 IST
<div class="paragraphs"><p>ಕಲಬುರಗಿಯಲ್ಲಿ ಗುಲಬರ್ಗಾ ‌ವಿವಿ‌ ಹಾಸ್ಟೆಲ್ ‌ಊಟದಲ್ಲಿ ಪತ್ತೆಯಾಗಿದ್ದ ಹುಳು&nbsp;ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ</p></div>

ಕಲಬುರಗಿಯಲ್ಲಿ ಗುಲಬರ್ಗಾ ‌ವಿವಿ‌ ಹಾಸ್ಟೆಲ್ ‌ಊಟದಲ್ಲಿ ಪತ್ತೆಯಾಗಿದ್ದ ಹುಳು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ

   

ಕಲಬುರಗಿ: ಗುಣಮಟ್ಟದ ಆಹಾರ‌ ವಿತರಿಸುವಂತೆ‌ ಹಾಗೂ ಪ್ರಭಾರ ವಾರ್ಡನ್ ಬದಲಿಸುವಂತೆ‌ ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಸರ್ಕಾರಿ ಸ್ನಾತಕೋತ್ತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ‌.

'ಮಂಗಳವಾರ ರಾತ್ರಿ ಊಟಕ್ಕೆ ನೀಡಿದ್ದ ಬೇಳೆ ಸಾರಿನಲ್ಲಿ ಹುಳು ಬಂದಿತ್ತು. ವಿದ್ಯಾರ್ಥಿಗಳು ‌ಪ್ರತಿಭಟನೆ‌ ನಡೆಸಿದ್ದರಿಂದ ಮತ್ತೊಮ್ಮೆ ಸಾರು ಸಿದ್ಧಪಡಿಸಿ ಕೊಡಲಾಗಿತ್ತು. ಇದೀಗ ಬುಧವಾರ ಬೆಳಿಗ್ಗೆ ನಾಸ್ಟಾದಲ್ಲಿ ಉಪ್ಪಿಟ್ಟು ‌ತಯಾರಿಸಲಾಗಿದ್ದು, ಅದರ‌ ಗುಣಮಟ್ಟವೂ ಚೆನ್ನಾಗಿಲ್ಲ' ಎಂದು ಪ್ರತಿಭಟನೆ‌ ನಿರತ ವಿದ್ಯಾರ್ಥಿಗಳು ‌ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಮಾಜ‌ ಕಲ್ಯಾಣ ಇಲಾಖೆ‌ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು ಹಾಗೂ ಹಾಸ್ಟೆಲ್ ನ ಪ್ರಭಾರ‌ ವಾರ್ಡನ್ ‌ಬದಲಿಸಬೇಕು, ಗುಣಮಟ್ಟದ ‌ಆಹಾರ‌ ವಿತರಣೆಗೆ ಕ್ರಮವಹಿಸಬೇಕು ಎಂದು ವಿದ್ಯಾರ್ಥಿಗಳು ‌ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.