ಚಿಂಚೋಳಿ: ಪತ್ನಿಯನ್ನೇ ಕೊಲೆ ಮಾಡಿದ ಪತಿಯಿಂದಾಗಿ ತಬ್ಬಲಿಯಾದ ಮಕ್ಕಳನ್ನು ದತ್ತು ಪಡೆಯುವುದಾಗಿ ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒಲವು ವ್ಯಕ್ತಪಡಿಸಿದ್ದಾರೆ.
ಅವರು ಇಲ್ಲಿನ ಚಂದಾಪುರಕ್ಕೆ ಭೇಟಿ ನೀಡಿ ಕೊಲೆಯಾದ ಪಾರ್ವತಿ ಮಲ್ಲಿಕಾರ್ಜುನ ಭೋವಿ ಅವರ ಮನೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದರು. ‘ಭೋವಿ ಸಮಾಜದ ಯುವಕರು ದುಶ್ಚಟಗಳನ್ನು ತೊರೆಯಬೇಕು. ಮದ್ಯವ್ಯಸನ ಬಿಡಬೇಕು’ ಎಂದು ಮನವಿ ಮಾಡಿದರು.
ನಂತರ ಸಾಲೇಬೀರನಹಳ್ಳಿಯಲ್ಲಿ ಕೊಲೆಯಾದ ರವಿಕುಮಾರ ಶಾಂತಪ್ಪ ಭೋವಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಜಗನ್ನಾಥ ರಾಜಾಪುರ, ಪುರಸಭೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಮುಖಂಡರಾದ ತಿಪ್ಪಣ್ಣ ಒಡೆಯರಾಜ, ಲಕ್ಷ್ಮಣ ಭೋವಿ, ಹಣಮಂತ ಭೋವಿ, ವಿಠಲ ಕುಸಾಳೆ, ಶ್ರೀಕಾಂತ ಪಿಟ್ಟಲ್, ಬಸವರಾಜ ವಾಡಿ, ಗೋಪಾಲ ಪೋಲಕಪಳ್ಳಿ, ನಾಗೇಶ ಚೌಡಾಪುರ, ನಾಗರಾಜ ಕೊಂಡಾ, ಅಂಕಿತಾ ಕಮಲಾಕರ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.