ADVERTISEMENT

ಕಲಬುರಗಿ ತೊಗರಿಗೆ ಹೆಚ್ಚುವರಿ ಬೆಂಬಲ ಬೆಲೆ ನೀಡಿ: ಬಸವರಾಜ ಇಂಗನ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 14:24 IST
Last Updated 14 ಆಗಸ್ಟ್ 2024, 14:24 IST
ಬಸವರಾಜ ಇಂಗನ್‌
ಬಸವರಾಜ ಇಂಗನ್‌   

ಕಲಬುರಗಿ: ‘ಜಿಲ್ಲೆಯ ಜಿಐ ಟ್ಯಾಗ್‌ ಹೊಂದಿರುವ ತೊಗರಿಗೆ ಕೇಂದ್ರ ಸರ್ಕಾರ ಶೇ20ರಷ್ಟು ಹೆಚ್ಚುವರಿಯಾಗಿ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎಂದು ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಇಂಗನ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2017ರಲ್ಲಿ ಜಿಲ್ಲೆಯ ತೊಗರಿಗೆ ಜಿಐ ಟ್ಯಾಗ್‌ ಬಂದಿದೆ. ಇತರೆಡೆ ಬೆಳೆಯುವ ತೊಗರಿಗಿಂತ ಜಿಲ್ಲೆಯಲ್ಲಿ ಬೆಳೆಯುವ ತೊಗರಿ ಉತ್ಕೃಷ್ಟವಾಗಿದ್ದು, ಹೆಚ್ಚು ಪೋಷಕಾಂಶಗಳು ಹೊಂದಿದೆ. ಈಗಾಗಲೇ ತೊಗರಿ ಮಾರಾಟಕ್ಕೆ ಜಿಲ್ಲೆಯಾದ್ಯಂತ 14 ರೈತ ಉತ್ಪಾದಕ ಕಂಪನಿಗಳು ನೋಂದಣಿಯಾಗಿವೆ’ ಎಂದರು.

‘1500 ಜನರು ರೈತರು ಉತ್ಪಾದಕ ಕಂಪನಿಗಳ ಸದಸ್ಯತ್ವ ಪಡೆದಿದ್ದಾರೆ. ದ್ವಿದಳ ಧಾನ್ಯಗಳ ಮಂಡಳಿ ಮೂಲಕವೂ ಸಹ ತೊಗರಿ ಮಾರಾಟ ಮಾಡಲು ರೈತರು ಮುಂದಾಗುತ್ತಿದ್ದಾರೆ’ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರ ಕರಿಕಲ್‌, ಬಸವರಾಜ ಪಾಟೀಲ, ಧನಂಜಯ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.