ADVERTISEMENT

ಮಹಿಳಾ ಐಟಿಎಫ್‌ ಟೂರ್ನಿ ಮಾರ್ಚ್‌ 1ರಿಂದ

ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:27 IST
Last Updated 24 ಫೆಬ್ರುವರಿ 2026, 7:27 IST
ಅಂತರರಾಷ್ಟ್ರೀಯ ಮಹಿಳಾ ಐಟಿಎಫ್–2026 ಟೂರ್ನಿ ಅಂಗವಾಗಿ ಕಲಬುರಗಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿದರು. ಸಾಹಿತ್ಯ ಆಲದಕಟ್ಟಿ, ಅವಿನಾಶ ಶಿಂದೆ, ರಾಯಪ್ಪ ಹುಣಸಗಿ ಇದ್ದಾರೆ
ಅಂತರರಾಷ್ಟ್ರೀಯ ಮಹಿಳಾ ಐಟಿಎಫ್–2026 ಟೂರ್ನಿ ಅಂಗವಾಗಿ ಕಲಬುರಗಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿದರು. ಸಾಹಿತ್ಯ ಆಲದಕಟ್ಟಿ, ಅವಿನಾಶ ಶಿಂದೆ, ರಾಯಪ್ಪ ಹುಣಸಗಿ ಇದ್ದಾರೆ   

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ಐಟಿಎಫ್–2026’ ಟೂರ್ನಿ ಮಾರ್ಚ್‌ 1ರಿಂದ 8ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್  ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ಐಟಿಎಫ್‌ ಹಮ್ಮಿಕೊಳ್ಳಲಾಗುತ್ತಿದೆ. ಟೂರ್ನಿಯ ಯಶಸ್ವಿ ಆಯೋಜನೆಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ’ ಎಂದರು.

ADVERTISEMENT

‘ಮಹಿಳಾ ಕ್ರೀಡಾಕೂಟ ಆಗಿರುವ ಕಾರಣಕ್ಕೆ ಹೆಚ್ಚಿನ ಭದ್ರತೆ ಇರಬೇಕು. ಯಾವುದೇ ಅವಘಡಗಳಾಗದಂತೆ ನೋಡಿಕೊಳ್ಳಬೇಕು. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ವಸತಿ ವ್ಯವಸ್ಥೆ ಚೆನ್ನಾಗಿ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರತಿದಿನ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಿ ಸಂಪೂರ್ಣ ದಿನದ ಜವಾಬ್ಧಾರಿ ಅವರೇ ವಹಿಸಿಕೊಳ್ಳಬೇಕು. ಸ್ಥಳೀಯ ಮಹಿಳಾ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಅಗತ್ಯ ಅನುದಾನದ ಜೊತೆಗೆ ಸ್ಥಳೀಯ ದಾನಿಗಳ ನೆರವು ಪಡೆಯಬಹುದಾಗಿದೆ’ ಎಂದರು.

‘ಪ್ರಾಯೋಜಕರನ್ನು ಹುಡುಕಬೇಕು. ಎಷ್ಟು ಆಟಗಾರರು ನಮ್ಮ ದೇಶದವರು ಹಾಗೂ ಹೊರ ದೇಶದವರು ಎಂದು ಗುರುತಿಸಿ ಊಟದ ಮೆನು ಸಿದ್ಧಪಡಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ಇರಲಿ’ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.