ADVERTISEMENT

ಬಡ ಹಿಂದೂ ಯುವಕರಿಗೆ ಧರ್ಮದ ಅಫೀಮು ಕೊಡುತ್ತಿರುವ ಬಿಜೆಪಿ: ಶಾಸಕ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 5:26 IST
Last Updated 6 ಏಪ್ರಿಲ್ 2022, 5:26 IST
ವಾಡಿಯಲ್ಲಿ ನಡೆದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು
ವಾಡಿಯಲ್ಲಿ ನಡೆದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು   

ವಾಡಿ: ‘ಬಿಜೆಪಿಗರು ಬಡಮಕ್ಕಳ ತಲೆಯೊಳಗೆ ಧರ್ಮದ ಆಫೀಮು ತುಂಬಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಡವರ ಮಕ್ಕಳನ್ನು ಆರ್‌ಎಸ್‌ಎಸ್ಶಾಖೆಗೆ ಕಳಿಸುವ ಬಿಜೆಪಿಗರು ತಮ್ಮ ಮಕ್ಕಳನ್ನು ಕಾಂನ್ವೆಂಟ್ ಶಾಲೆಗೆ ಕಳಿಸುತ್ತಿದ್ದಾರೆ. ಬಿಜೆಪಿ ಯಾವ ಪ್ರಮುಖ ಮುಖಂಡರ ಮಕ್ಕಳುಕೇಸರಿ ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ ಹೇಳಿ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಾದಿಗ ಸಮಾಜದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಾಬು ಜಗಜೀವನರಾಂ ಜಯಂತಿ ಸಭೆಯ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಸಾಹಿತಿ ದಾಸನೂರು ಕೂಸಣ್ಣ, ಡಾ. ಮಾಣಿಕ ಟಿ ಕಟ್ಟಿಮನಿ, ಲಿಂಗರಾಜ ತಾರಾಫೈಲ್ ಮಾತನಾಡಿದರು.

ADVERTISEMENT

ಮಾಪಣ್ಣ ಹದನೂರ, ಪುರಸಭೆ ಅಧ್ಯಕ್ಷೆ ಝರೀನಾ ಬೇಗಂ, ಟೋಪಣ್ಣಾ ಕೋಮಟೆ, ಸೈಯ್ಯದ್ ಮಹೇಮೂದ ಸಾಹೇಬ್, ಶಂಕರಯ್ಯಸ್ವಾಮಿ ಮದ್ರಿ, ಮಲ್ಲಿಕಾರ್ಜುನ ಕಾಳಗಿ, ರಾಮಚಂದ್ರ ಮುನಿಯಪ್ಪರೆಡ್ಡಿ, ಗೀತಾ ರಾಜು ವಾಡೇಕರ್, ಶ್ರೀನಿವಾಸ ಸಗರ, ಕಾಟಮಳ್ಳಿ, ಸಿದ್ರಾಮ ತೆಗನೂರು, ಮಲ್ಲಿಕಾರ್ಜುನ ಸೈದಾಪೂರ, ಸುಮಿತ್ರಪ್ಪಾ ಹೊಸೂರ, ಬಾಲರಾಜ್ ಬಳಿಚಕ್ರ, ಪರಶುರಾಮ್ ಕಟ್ಟಿಮನಿ, ರಾಜು ಮರೆಡ್ಡಿ, ಪರಮೇಶ ಕೆಲ್ಲೂರು, ಪುರಸಭೆ ಉಪಾಧ್ಯಕ್ಷ ದೇವಿಂದ್ರಪ್ಪಕರದಳ್ಳಿ ಸೇರಿದಂತೆ ಸಮಾಜದ ಮುಕಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.