ADVERTISEMENT

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:25 IST
Last Updated 6 ಅಕ್ಟೋಬರ್ 2022, 6:25 IST
ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ವಿಶೇಷ ಸ್ವಚ್ಛತಾ ಅಭಿಯಾನ 2.0 ಕಾರ್ಯ ವೀಕ್ಷಿಸಿದ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ
ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ವಿಶೇಷ ಸ್ವಚ್ಛತಾ ಅಭಿಯಾನ 2.0 ಕಾರ್ಯ ವೀಕ್ಷಿಸಿದ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ   

ಕಲಬುರಗಿ: ಸ್ವಚ್ಛ ಭಾರತ ವಿಶೇಷ ಅಭಿಯಾನ 2.0 ಪ್ರಯುಕ್ತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ತನ್ನ ವಿಮಾನ ನಿಲ್ದಾಣಗಳಲ್ಲಿ ಸ್ವಚ್ಛತೆ ವಿಶೇಷ ಅಭಿಯಾನ 2.0 ಪ್ರಾರಂಭಿಸಿದೆ. ಅದರ ಭಾಗವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 31ರವರೆಗ ಸ್ವಚ್ಛತಾ ಮಿಷನ್ ಅಭಿಯಾನ ಕಾರ್ಯ ಜರುಗಲಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಈ ಅಭಿಯನಾದಡಿ ಎರಡು ಹಂತಗಳ ಕಾರ್ಯಕ್ರಮ ಯೋಜಿಸಿದ್ದೇವೆ. ಪೂರ್ವಸಿದ್ಧತಾ ಹಂತದಲ್ಲಿ ವಿಮಾನ ನಿಲ್ದಾಣದಾದ್ಯಂತ ಸೂಕ್ಷ್ಮ ಜಾಗಗಳನ್ನು ಗುರುತಿಸಿವುದು. ಎರಡನೇ ಹಂತದಲ್ಲಿ ಗುರುತಿಸಲಾದ ಜಾಗಗಳ (ಒಳ ಅಥವಾ ಹೊರ) ಸ್ವಚ್ಛತೆ, ದಾಖಲೆಗಳ ನಿರ್ವಹಣೆ, ಕಡತಗಳಲ್ಲಿನ ಕೊಳೆ ತೆಗೆಯುವುದು, ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಸೇರಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಂಸತ್ ಸದಸ್ಯರು, ರಾಜ್ಯ ಸರ್ಕಾರಗಳ ಮತ್ತು ಸಂಸತ್ತಿನ ಆಶ್ವಾಸನೆಗಳ ದಾಖಲೆಗಳ ಮನವಿ ಹಾಗೂ ಶಿಫಾರಸುಗಳು, ವಿಮಾನ ನಿಲ್ದಾಣ, ಎಎಐ ಸಂಬಂಧಿತ ಕಚೇರಿಗೆ ಸಂಬಂಧಿಸಿದ ದಾಖಲೆಗಳು ಇವೆ. ನೀರಿನ ಟ್ಯಾಂಕ್‌ಗಳ ತಪಾಸಣೆ, ಹಳೆಯ ವಸ್ತುಗಳ ಮತ್ತು ಬಳಕೆಯಾಗದ ಸಾಮಗ್ರಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.