ADVERTISEMENT

ಕಲಬುರಗಿ|ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟ: 27 ಜಿಲ್ಲೆಗಳ 1200 ಅಥ್ಲೀಟ್‌ಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:49 IST
Last Updated 12 ನವೆಂಬರ್ 2025, 6:49 IST
<div class="paragraphs"><p>ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಮಂಗಳವಾರ ನಡೆದಿದ್ದು, ಕ್ರೀಡಾಪಟುಗಳ ಪಥ ಸಂಚಲನ ಗಮನ ಸೆಳೆಯಿತು&nbsp;&nbsp;&nbsp;&nbsp;&nbsp;&nbsp;&nbsp;&nbsp;  </p></div>

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಮಂಗಳವಾರ ನಡೆದಿದ್ದು, ಕ್ರೀಡಾಪಟುಗಳ ಪಥ ಸಂಚಲನ ಗಮನ ಸೆಳೆಯಿತು        

   

ಪ್ರಜಾವಾಣಿ ಚಿತ್ರ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಬಾಲಕರ ಕಲರವ ಮಾರ್ದನಿಸಿತು. 27 ಜಿಲ್ಲೆಗಳಿಂದ ಬಂದಿದ್ದ ಪಿಯು ಕಾಲೇಜುಗಳ 1200ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಅಣಿಯಾದರು.

ADVERTISEMENT

ಇಲ್ಲಿ ಬುಧವಾರದಿಂದ ಆರಂಭವಾಗುವ ಕ್ರೀಡೆಗಳ ಉದ್ಘಾಟನಾ ಸಮಾರಂಭ ಮಂಗಳವಾರ ಸಂಜೆ ಜರುಗಿತು. ಬಾಲಕರು ನಡೆಸಿದ ಆಕರ್ಷಕ ಪಥಸಂಚಲನಕ್ಕೆ ಗಣ್ಯರು, ಸಾರ್ವಜನಿಕರು ತಲೆದೂಗಿದರು. ಕ್ರೀಡಾಜ್ಯೋತಿ ಸ್ವೀಕಾರ, ಕ್ರೀಡಾ ಧ್ವಜಾರೋಹಣ, ಪ್ರತಿಜ್ಞಾವಿಧಿ ಸ್ವೀಕಾರವೂ ನಡೆದವು.

ಕಾರ್ಯಕ್ರಮ ಉದ್ಘಾಟಿಸಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ‘ಶರಣಬಸವೇಶ್ವರ, ಖಾಜಾ ಬಂದಾನವಾಜರು ನೆಲೆಸಿದ ನೆಲದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. ಅಣ್ಣ–ತಮ್ಮಂದಿರಂತೆ ಆಡಬೇಕು. ಸೋಲು–ಗೆಲುವು ಸಾಮಾನ್ಯ. ಆಟದಲ್ಲಿ ಭಾಗವಹಿಸುವುದೇ ಮುಖ್ಯ. ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವ ಕೊಡಿ. ಕಲಿತ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ, ಕೀರ್ತಿ ತರುವ ಕೆಲಸ ಮಾಡಿ. ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಮಾದರಿಯಾಗಿಟ್ಟುಕೊಳ್ಳಿ’ ಎಂದರು.

‘ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಆಡಬೇಕು. ತೀರ್ಪುಗಾರರು ನ್ಯಾಯಕ್ಕೆ ಬೆಲೆ ಕೊಡಬೇಕು. ಸಂಪೂರ್ಣ ಪ್ರಯತ್ನ ಹಾಕಿ ಗೆಲ್ಲಲು ಪ್ರಯತ್ನಿಸಿ. ತಂಟೆ–ತಕರಾರು ಮಾಡಿಕೊಳ್ಳಬೇಡಿ. ಡಿಡಿಪಿಯು ಇಲಾಖೆಯಿಂದ ನಿಮಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಭರವಸೆ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಅಕ್ಕಣ್ಣ ಮಾತನಾಡಿ, ನಿಯಮಗಳನ್ನು ಅನುಸರಿಸಿ ಕ್ರೀಡಾಕೂಟ ಯಶಸ್ಸಿಗೆ ಸಹಕರಿಸಲು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಶ್ರೀಗುರು ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಬಸವರಾಜ ಡಿಗ್ಗಾವಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಸವರಾಜ ಬಿರಾಜದಾರ, ಶ್ರೀಶೈಲ ಬೋನಾಳ, ದೇವನಗೌಡ ಪಾಟೀಲ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿವಿಧ ಸಮಿತಿಗಳ ಮುಖ್ಯಸ್ಥರು ಮತ್ತು ಉಪನ್ಯಾಸಕರು ಹಾಜರಿದ್ದರು.

ಎನ್‌ಎಸ್‌ಎಸ್‌ ಜಿಲ್ಲಾ ನೋಡಲ್ ಅಧಿಕಾರಿ ಪಾಂಡು ಎಲ್. ರಾಠೋಡ ಸ್ವಾಗತಿಸಿದರು. ರಾಜು ಗಂಗಾಧರ ವಂದಿಸಿದರು.

ನ.14ರವರೆಗೆ ಅಥ್ಲೆಟಿಕ್ಸ್ ನಡೆಯಲಿದ್ದು ವಿದ್ಯಾರ್ಥಿಗಳು ಸಾಮರ್ಥ್ಯ ಪಣಕ್ಕೊಡ್ಡಲಿದ್ದಾರೆ. ವಿದ್ಯಾರ್ಥಿಗಳು ತಂಡಗಳ ವ್ಯವಸ್ಥಾಪಕರಿಗೆ ಮೂರೂ ದಿನ ಉಚಿತ ಊಟದ ವ್ಯವಸ್ಥೆ ಇರಲಿದೆ 
ಜೆ. ಮಲ್ಲಪ್ಪ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕ್ರೀಡಾಕೂಟದ ಸಂಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.