ADVERTISEMENT

ಕಲಬುರಗಿ | ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:42 IST
Last Updated 15 ಜನವರಿ 2026, 7:42 IST
ಕಲಬುರಗಿಯ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ ಚಾಂಪಿಯನ್‌ಶಿಪ್‌ಗೆ ಶಾಸಕ ಅಲ್ಲಮಪ್ರಭು ಪಾಟೀಲ ಬುಧವಾರ ಚಾಲನೆ ನೀಡಿದರು
ಕಲಬುರಗಿಯ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ ಚಾಂಪಿಯನ್‌ಶಿಪ್‌ಗೆ ಶಾಸಕ ಅಲ್ಲಮಪ್ರಭು ಪಾಟೀಲ ಬುಧವಾರ ಚಾಲನೆ ನೀಡಿದರು   

ಕಲಬುರಗಿ: ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್, ಜಿಲ್ಲಾ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ‘ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ ಚಾಂಪಿಯನ್‌ಶಿಪ್‌ (ಕೆಬಿಎಲ್‌)’ಗೆ ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಬುಧವಾರ ಚಾಲನೆ ನೀಡಿದರು.

ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರತಾಪಸಿಂಗ್‌ ತಿವಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ್ವರ, ಜಿಲ್ಲಾ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಉದನೂರ, ಕಾರ್ಯದರ್ಶಿ ಚಂದ್ರಕಾಂತ ಶಿರೋಳಿ, ರಾಮೇಶ್ವರ ಭಾಟಿ, ಸುಶೀಲಕುಮಾರ ಮಾಮಡಿ, ಧರ್ಮರಾಜ ಹೇರೂರ, ಡಾ.ಅಮರೇಶ ಬಿರಾದಾರ, ಡಾ.ಬಸವೇಶ ಪಾಟೀಲ, ದಯಾನಂದಸ್ವಾಮಿ ಹಿರೇಮಠ, ಭರತ್‌ ಭೂಷಣ, ಸಂತೋಷ ತಾಡಂಪಳ್ಳಿ, ಮಹೇಶ ಪವಾರ, ಪ್ರವೀಣ ಪುಣೆ ಇದ್ದರು.

ಶಂಕರ್‌ ಸೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ಸ್ವಾಗತಿಸಿದರು.

ADVERTISEMENT

ತಂಡಗಳು: ಲೀಗ್‌ನಲ್ಲಿ ಕಲ್ಯಾಣ ಕರ್ನಾಟಕದ ಎಂಟು ತಂಡಗಳು ಭಾಗವಹಿಸಿವೆ. ಕಲಬುರಗಿಯ ಅಕ್ಕಮಹಾದೇವಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌, ಕುವೆಂಪು ಬ್ಯಾಸ್ಕೆಟ್‌ಬಾಲ್‌ ಕ್ಲಬ್, ಭಗವಾನ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌, ವೈಸಿಬಿಸಿ ಬಳ್ಳಾರಿ, ನಂದಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಬಳ್ಳಾರಿ, ವಿವೇಕ್ ಆನಂದ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್ ಮಾದನಹಿಪ್ಪರಗಿ, ಎಬಿಸಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಬೀದರ್, ಮಾಣಿಕ್‌ಪ್ರಭು ಬ್ಯಾಸ್ಕೆಟ್‌ಬಾಲ್‌ ಕ್ಲಬ್ ಹಮನಾಬಾದ್ ತಂಡಗಳು ಪಾಲ್ಗೊಂಡಿವೆ. ಜ.15ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.