ADVERTISEMENT

ಕಲಬುರಗಿ: ‘ನಿರ್ಮಾಣ್–2025’ ರ್‍ಯಾಂಪ್‌ನಲ್ಲಿ ಹೆಜ್ಜೆ ಹಾಕಿದ ಚೆಲುವೆಯರು

ಕಿರಣ ನಾಯ್ಕನೂರ
Published 28 ಮೇ 2025, 4:33 IST
Last Updated 28 ಮೇ 2025, 4:33 IST
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟೆಕ್ನೊ ಸಾಂಸ್ಕೃತಿಕ ಉತ್ಸವದಲ್ಲಿ (ನಿರ್ಮಾಣ–2025) ಫೋಟೊಕ್ಕೆ ಪೋಸ್‌ ನೀಡಿದ ವಿದ್ಯಾರ್ಥಿನಿಯರು                    ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟೆಕ್ನೊ ಸಾಂಸ್ಕೃತಿಕ ಉತ್ಸವದಲ್ಲಿ (ನಿರ್ಮಾಣ–2025) ಫೋಟೊಕ್ಕೆ ಪೋಸ್‌ ನೀಡಿದ ವಿದ್ಯಾರ್ಥಿನಿಯರು                    ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌   

ಕಲಬುರಗಿ: ಕ್ಯಾಟ್‌ವಾಕ್‌, ಫ್ರೀ ಸ್ಟೈಲು. ಕೈ ಬೀಸಿ ನಡೆಯುವವರು, ಸೊಂಟದ ಮೇಲೆ ಕೈಯಿಟ್ಟು ಬಳುಕುವವರು, ಜೇಬಲ್ಲಿ ಕೈಯಿಟ್ಟು ನಡೆಯುವವರು. ನೇರ ನೋಟದವರು, ಅಕ್ಕ–ಪಕ್ಕ ನೋಡುವವರು... 

ಸೀರೆಯುಟ್ಟ ಮುಗ್ಧ ಚೆಲುವೆ, ನೆಲ ಮುಟ್ಟವ ಮೇಲಂಗಿ ಹಾಕಿದ ಸಾದಗಪ್ಪು ಸುಂದರಿ, ಜಿಂಕೆಯ ಕೊಂಬು ತೊಟ್ಟ ಬಿಳಿ ಚಿಟ್ಟೆ, ಕರಿ ಸೀರೆ ಕಪ್ಪು ಕನ್ನಡಕ, ಬಿಚ್ಚು ಮುಡಿ ಚುಚ್ಚುವ ನೋಟ... ಇಂಥ ಮನಮೋಹಕ ದೃಶ್ಯ ಕಂಡು ಬಂದಿದ್ದು ನಗರದ ಪಿಡಿಎ ಕಾಲೇಜಿನಲ್ಲಿ.

‘ನಿರ್ಮಾಣ್‌–2025’ ಅಂಗವಾಗಿ ನಡೆದ ಪ್ಯಾಶನ್‌ ಶೋ ರ್‍ಯಾಂಪ್‌ನಲ್ಲಿ ಲಲನೆಯರು ಎದುರು ಕುಳಿತವರ ಎದೆಗೆ ಇರಿಯುವಂತೆ ಹರಿತ ನೋಟದಿಂದ ಸೊಂಟ ಬಳಕಿಸುತ್ತಾ ನಡೆಯುತ್ತಿದ್ದರೆ ಹುಡುಗರ ಕೇಕೆ ಮುಗಿಲು ಮುಟ್ಟಿತ್ತು. 

ADVERTISEMENT

ಇಡೀ ಕಾಲೇಜಿನ ಹುಡುಗರ ‘ಹೃದಯ’ಗಳನ್ನೇ ಬಟ್ಟೆ ಮೇಲೆ ಅಂಟಿಸಿಕೊಂಡ ಕೆಂಪು ಮೇಲಂಗಿಯ ಚೂಪು ಮೂಗಿನ ಮುಗ್ಧೆ, ಯಾವ ‘ರಾಣಿ’ಗೂ ಕಮ್ಮಿ ಇಲ್ಲ ಎನ್ನುವಂತೆ ಸ್ಕರ್ಟ್‌ ತೊಟ್ಟ ಚೆಲುವೆ ನಡೆಯುತ್ತಿದ್ದರು.

ಲಂಗ–ಧಾವಣಿ, ಲೆಂಹಗಾ, ಮಿನಿ–ಲಾಂಗ್ ಸ್ಕರ್ಟ್‌. ಸ್ಲಿವ್‌ ಲೆಸ್‌, ತ್ರೀ ಫೋರ್ತ್, ಬಲೂನ್, ಲೋ ನೆಕ್‌, ಡೀಪ್‌ ಬ್ಯಾಕ್ ಬ್ಲೌಸ್‌... ವಿವಿಧ ಬಗೆಯ, ವಿನ್ಯಾಸದ ಬಟ್ಟೆ. ಅದಕ್ಕೆ ಹೊಂದುವ ಕನ್ನಡಕ ಹಾಕಿ ಗಮನ ಸೆಳೆದರು.  

ನಾವ್‌ ಯಾರಿಗೂ ಕಡಿಮೆ ಇಲ್ಲ ಎಂದು ಹುಡುಗುರೂ ರ್‍ಯಾಂಪ್‌ನಲ್ಲಿ ಮಿಂಚಿದರು. ಸಿಕ್ಸ್‌ ಪ್ಯಾಕ್‌ನ ಜಿಮ್‌ ಬಾಯ್ಸ್‌ ಓಪನ್‌ ಟಾಪ್‌ನಲ್ಲಿ ಜಿರೋ ಸೈಜ್‌ನ ಹುಡುಗಿಯರೊಂದಿಗೆ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿದರು. 

ಕೊನೆಯಲ್ಲಿ ಶಿಕ್ಷಕ, ಶಿಕ್ಷಕಿಯರೂ ರ್‍ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.

ಹೊರಗೆ ಡಿಜೆ ಸದ್ದು ಕೇಳಿಬಂದಿದ್ದೇ ತಡ; ಹುಡುಗಿಯರು ಸೊಂಟಕ್ಕೆ ಸೆರಗು ಸಿಕ್ಕಿಸಿ, ಹುಡುಗರು ತೋಳು ಏರಿಸಿ ಬೆವರು ಇಳಿಯುವವರೆಗೂ ಕುಣಿದು ಕುಪ್ಪಳಿಸಿದರು. 

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟೆಕ್ನೊ ಸಾಂಸ್ಕೃತಿಕ ಉತ್ಸವ (ನಿರ್ಮಾಣ–2025) ದಲ್ಲಿ ವಿದ್ಯಾರ್ಥಿಗಳಿಂದ ನಡೆದ ಫ್ಯಾಶನ್ ಶೋ ಝಲಕ್     

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟೆಕ್ನೊ ಸಾಂಸ್ಕೃತಿಕ ಉತ್ಸವ (ನಿರ್ಮಾಣ–2025)ದ ಪ್ಯಾಶನ್‌ ಶೋನಲ್ಲಿ ವಿದ್ಯಾರ್ಥಿನಿಯರು ಸೀರೆಯುಟ್ಟು ಹೆಜ್ಜೆ ಹಾಕಿದರು 
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟೆಕ್ನೊ ಸಾಂಸ್ಕೃತಿಕ ಉತ್ಸವ (ನಿರ್ಮಾಣ–2025)ದ ಫ್ಯಾಶನ್ ಶೋನಲ್ಲಿ ಶಿಕ್ಷಕರು ಹೆಜ್ಜೆ ಹಾಕಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.