
ಸಾವು
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ತಾಲ್ಲೂಕಿನ ಫಿರೋಜಾಬಾದ್ ಬಳಿಯ ಹತ್ತಿ ಮಿಲ್ ಸಮೀಪ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಫಿರೋಜಾಬಾದ್ ಗ್ರಾಮದ ನಿವಾಸಿ ಈರಯ್ಯ ನೆಲೋಗಿ (44) ಮೃತರು.
ಈರಯ್ಯ ಜೇವರ್ಗಿ ಕಡೆಯಿಂದ ಫಿರೋಜಾಬಾದ್ ಗ್ರಾಮದತ್ತ ಹೊರಟ್ಟಿದ್ದರು. ಈ ವೇಳೆ ಎದುರಿನಿಂದ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ವೇಗವಾಗಿ ಬಂದ ಬೈಕ್ ಸವಾರರೊಬ್ಬರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಕಲಬುರಗಿ ಸಂಚಾರ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯ ಪುಟಾಣಿ ಗಲ್ಲಿಯ ಖೂಬಾ ಕಾಂಪ್ಲೆಕ್ಸ್ ಬಳಿ ಉಚಿತವಾಗಿ ಹಂಚುತ್ತಿರುವ ಸೀರೆ ಕೊಡಿಸುವುದಾಗಿ ನಂಬಿಸಿದ ವಂಚಕ ಮಹಿಳೆಯಬ್ಬರಿಂದ ಚಿನ್ನದ ಮಾಂಗಲ್ಯ ಸರ ಪಡೆದುಕೊಂಡು ಪರಾರಿಯಾಗಿದ್ದಾನೆ.
ನೇತಾಜಿ ಚೌಕ ನಿವಾಸಿ ಜಗದೇವಿ ಹರನಾಳ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಈ ಕುರಿತು ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯ ನರೋಣಾ ಗಲ್ಲಿಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಕ್ರಮಕೈಗೊಂಡಿರುವ ಪೊಲೀಸರು ₹5,600 ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮೂವರ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಜೆಎಂ ಕಾಮಗಾರಿ ಸರಿಯಾಗಿ ನಡೆಸುವಂತೆ ಗುತ್ತಿಗೆದಾರನಿಗೆ ಹೇಳಿದ್ದಕ್ಕೆ ದ್ವೇಷ ಸಾಧಿಸಿ ಆತ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ಫರಹತಾಬಾದ್ ನಿವಾಸಿ ಭೀಮಾಶಂಕರ ವಗ್ಗರ ಆರೋಪಿಸಿದ್ದಾರೆ.
‘ಊರಿನ ವೀರಭದ್ರೇಶ್ವರ ಗಲ್ಲಿಯಲ್ಲಿ ಜೆಜೆಎಂ ಕಾಮಗಾರಿಯಡಿ ನಲ್ಲಿ ಪೈಪ್ ರಸ್ತೆಯಲ್ಲಿ ಸರಿಯಾಗಿ ಕೆದರದೇ ಮೇಲೆಯೇ ಅಳವಡಿಸಲಾಗುತ್ತಿತ್ತು. ಹೀಗೆ ಮಾಡಿದರೆ ಪೈಪ್‌ಗಳ ಒಡೆಯುತ್ತವೆ ಎಂದಾಗ ನನ್ನೊಂದಿಗೆ ಗುತ್ತಿಗೆದಾರ ಜಗಳಕ್ಕೆ ಮಾಡಿದ್ದ. ಎರಡು ದಿನಗಳ ಬಳಿಕ ರಾತ್ರಿ 10 ಗಂಟೆಗೆ ನಾನು ಬಯಲು ಬಹಿರ್ದೆಸೆಗೆ ಹೊಟ್ಟಿದ್ದಾಗ ಬಸ್ ನಿಲ್ದಾಣ ಬಳಿಗೆ ಬಂದ ಗುತ್ತಿಗೆದಾರ ಲಕ್ಷ್ಮಣ ಜಾಧವ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ’ ಎಂದು ಭೀಮಾಶಂಕರ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.