ADVERTISEMENT

ಸಲೀಂಅಲಿ ಜನ್ಮದಿನ: ಪಕ್ಷಿ ವೀಕ್ಷಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:53 IST
Last Updated 11 ನವೆಂಬರ್ 2025, 6:53 IST
ಗುಲಬರ್ಗಾ ವಿವಿ ಕ್ಯಾಂಪಸ್‌ನಲ್ಲಿ ಶರಣಬಸವೇಶ್ವರ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪಕ್ಷಿ ವೀಕ್ಷಣೆ ನಡೆಸಿದರು
ಗುಲಬರ್ಗಾ ವಿವಿ ಕ್ಯಾಂಪಸ್‌ನಲ್ಲಿ ಶರಣಬಸವೇಶ್ವರ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪಕ್ಷಿ ವೀಕ್ಷಣೆ ನಡೆಸಿದರು   

ಕಲಬುರಗಿ: ಪಕ್ಷಿತಜ್ಞ ಡಾ.ಸಲೀಂಅಲಿ ಜಯಂತಿ ಅಂಗವಾಗಿ ನಗರದ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಣಿ ವಿಜ್ಞಾನ ವಿಭಾಗ ಮತ್ತು ಇಕೊ ಕ್ಲಬ್ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪಕ್ಷಿಗಳ ವೀಕ್ಷಣೆ ಕಾರ್ಯಕ್ರಮ ನಡೆಸಲಾಯಿತು.

ಬೆಳಿಗ್ಗೆಯೇ ವಿದ್ಯಾರ್ಥಿಗಳು ಕ್ಯಾಮೆರಾ, ಬೈನಾಕ್ಯುಲರ್‌ಗಳನ್ನು ಹೆಗಲಿಗೇರಿಸಿಕೊಂಡು ಗುಲಬರ್ಗಾ ವಿವಿಯ ಕ್ಯಾಂಪಸ್‌ಗೆ ಲಗ್ಗೆಯಿಟ್ಟರು. ಬೆಳಿಗ್ಗೆ 7 ರಿಂದ 9 ಗಂಟೆ ತನಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಆಸಕ್ತ ಪಕ್ಷಿ ಪ್ರೇಮಿಗಳ ತಂಡವು ವಿವಿಧ 36 ಜಾತಿಯ ಪಕ್ಷಿಗಳನ್ನು ಗುರುತಿಸಿತು.

ಪ್ರಾಂಶುಪಾಲ ಪ್ರೊ. ಬಿ.ರಾಮಕೃಷ್ಣ ರೆಡ್ಡಿ ಮಾತನಾಡಿ, ‘ಪಕ್ಷಿಗಳ ಪ್ರಮುಖ ನಡವಳಿಕೆ, ಅವುಗಳ ವೈಶಿಷ್ಟ್ಯ ಅರಿಯುವುದು ಈ ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳು ಪಕ್ಷಿಗಳನ್ನು ವೀಕ್ಷಿಸಿ ಅವುಗಳ ಬಗೆಗಿನ ಕುತೂಹಲದ ಸಂಗತಿಗಳನ್ನು ದಾಖಲಿಸಿಕೊಳ್ಳಬೇಕು’ ಎಂದರು.

ADVERTISEMENT

ತಂಡದ ಪವನ್‌ ಮೋಹನ ರಾವ್, ಅನಿಲ, ಅಭಿಷೇಕ ಉಪ್ಪಾರ, ಐಶ್ವರ್ಯ, ರಾಜಶೇಖರ ಪಕ್ಷಿಗಳ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತಂಡದ ಸದಸ್ಯರು ಬೈನಾಕ್ಯುಲರ್ ಬಳಸಿ ಪಕ್ಷಿಗಳನ್ನು ಕಣ್ತುಂಬಿಕೊಂಡರು. ಹಲವರು ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.