
ಪ್ರಜಾವಾಣಿ ವಾರ್ತೆ
ಲ್ಯಾಪ್‌ಟಾಪ್ (ಸಾಂದರ್ಭಿಕ ಚಿತ್ರ)
ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಿಲ್ಲಿಸಿದ್ದ ಕಾರಿನ ಹಿಂಬದಿ ಎಡಬದಿಯ ಗಾಜು ಒಡೆದ ಕಳ್ಳರು ಮೂರು ಲ್ಯಾಪ್‌ಟಾಪ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.
‘ಎಚ್.ಪಿ ಕಂಪನಿಯ ವಿವಿಧ ಮಾದರಿಯ ಮೂರು ಲ್ಯಾಪ್‌ಟಾಪ್‌ಗಳನ್ನು ಕಾರಿನ ಹಿಂಬದಿ ಸೀಟಿನ ಮೇಲೆ ಇಡಲಾಗಿತ್ತು. ನನ್ನ ಪತ್ನಿ ಕಾರನ್ನು ಸೂಪರ್ ಮಾರ್ಕೆಟ್‌ನಲ್ಲಿ ನಿಲ್ಲಿಸಿ ಬಟ್ಟೆ ಖರೀದಿಸಿ ಬರುವಷ್ಟರಲ್ಲಿ ಕಳ್ಳರು ಕಾರಿನ ಗಾಜು ಒಡೆದು ₹ 1.33 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಕದ್ದಿದ್ದಾರೆ’ ಎಂದು ದತ್ತ ನಗರದ ನಿವಾಸಿ ಗುರುರಾಜ ನಿಲಂಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.