ಕಲಬುರಗಿ: ತಾಲ್ಲೂಕಿನ ಗರೂರ (ಬಿ) ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಕಲಬುರಗಿಯ ಸಮತಾ ಕಾಲೊನಿ ನಿವಾಸಿ ನಾಗಪ್ಪ (60) ಕೊಲೆಯಾದವರು. ನಾಗಪ್ಪ ಅವರು ಜಮೀನು ವಿವಾದ ಕುರಿತು ಮಾತುಕತೆ ನಡೆಸಲು ಗುರುವಾರ ಸಂಜೆ ಗ್ರಾಮಕ್ಕೆ ಹೋದಾಗ ಹತ್ತಿರದ ಸಂಬಂಧಿಕರಾದ ಐದಾರು ಜನ ಸೇರಿಕೊಂಡು ಕೊಡಲಿಯಿಂದ ಎದೆ, ಕತ್ತು ಮತ್ತು ಭುಜಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಫರಹತಾಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.