ADVERTISEMENT

ಕಲಬುರಗಿ: ಸ್ನೇಹಿತನ ಕೊಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:13 IST
Last Updated 15 ಫೆಬ್ರುವರಿ 2026, 4:13 IST
<div class="paragraphs"><p>ಬಂಧನ</p></div>

ಬಂಧನ

   

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಬ್ರಹ್ಮಪುರ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

ದತ್ತಾತ್ರೆ ಅಲಿಯಾಸ್‌ ದತ್ತು ಮನೋಹರ ಘನಾತೆ (32) ಬಂಧಿತ ಆರೋಪಿ. ಗಾಜಿಪುರ ಬಡಾವಣೆ ನಿವಾಸಿ ಶರಣಬಸಪ್ಪ ಗೌಳಿ (35) ಶುಕ್ರವಾರ ಸಂಜೆ ಕೊಲೆಯಾಗಿದ್ದರು.

ADVERTISEMENT

‘ಶರಣಬಸಪ್ಪ ಅವರಿಗೆ ದತ್ತು ತನ್ನ ಮೊಬೈಲ್‌ ದುರಸ್ತಿ ಮಾಡಲು ಕೊಟ್ಟಿದ್ದ. ಆದರೆ, ವಾಪಸ್‌ ಮರಳಿಸಿರಲಿಲ್ಲ. ಇದರಿಂದ ಇಬ್ಬರ ನಡುವೆ ವಾಗ್ವಾದವಾಗಿದೆ. ಆಗ ದತ್ತು ಶರಣಬಸಪ್ಪ ಅವರ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧನ: ನಗರದ ಆಳಂದ ಚೆಕ್‌ಪೋಸ್ಟ್‌ನಿಂದ ರಾಮತೀರ್ಥ ದೇವಸ್ಥಾನದ ಕಡೆಗೆ ಹೋಗುವ ರಸ್ತೆ ಪಕ್ಕದ ಒಂದು ಸಣ್ಣ ಕೋಣೆಯಲ್ಲಿ ಅಡುಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಆಟೊರಿಕ್ಷಾಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೇದಾರನಾಥ ಶರಣಪ್ಪ ಮಾಳಗೆ(23) ಬಂಧಿತ ಆರೋಪಿ. ಗ್ಯಾಸ್‌ ಸಿಲಿಂಡರ್‌ಗಳು, ತೂಕದ ಯಂತ್ರ ಸೇರಿದಂತೆ ₹5,500 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆಹಾರ ನಿರೀಕ್ಷಕ ಯಲ್ಲಾಲಿಂಗ ಸುಧಾಕರ ಕಡಕೋಳಕರ ನೀಡಿದ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.