ADVERTISEMENT

ಕಲಬುರಗಿಯಲ್ಲಿ ಧಾರಾಕಾರ ಮಳೆ: ಜನ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 3:52 IST
Last Updated 11 ಸೆಪ್ಟೆಂಬರ್ 2025, 3:52 IST
<div class="paragraphs"><p>ಕಲಬುರಗಿಯಲ್ಲಿ ಗುರುವಾರ ನಸುಕಿನಿಂದ ಸುರಿಯುತ್ತಿರುವ ಧಾರಾಕಾರ‌ ಮಳೆಗೆ ರಸ್ತೆ ಮೇಲೆ ನೀರು ಹರಿಯಿತು</p></div>

ಕಲಬುರಗಿಯಲ್ಲಿ ಗುರುವಾರ ನಸುಕಿನಿಂದ ಸುರಿಯುತ್ತಿರುವ ಧಾರಾಕಾರ‌ ಮಳೆಗೆ ರಸ್ತೆ ಮೇಲೆ ನೀರು ಹರಿಯಿತು

   

ಕಲಬುರಗಿ: ನಗರದ‌ ಸೇರಿದಂತೆ ಜಿಲ್ಲೆಯ ‌ವಿವಿಧೆಡೆ ಗುರುವಾರ ನಸುಕಿನಿಂದಲೇ ವರುಣನ ಅಬ್ಬರ ಶುರುವಾಗಿದೆ.

ಬೆಳಿಗ್ಗೆ 4 ಗಂಟೆಯಿಂದ ಧಾರಾಕಾರವಾಗಿ ಮಳೆ‌ ಸುರಿಯುತ್ತಿದ್ದು, ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಜನ‌ಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ನೌಕರರು ಹಾಗೂ ಕೂಲಿ‌ಕೆಲಸಕ್ಕೆ ತೆರಳುವ‌ ಕಾರ್ಮಿಕರು ಪರದಾಡಿದರು.

ADVERTISEMENT

ಧಾರಾಕಾರ ಮಳೆಗೆ ಚರಂಡಿಗಳು ತುಂಬಿ ಹರಿದವು. ರಸ್ತೆ ಮೇಲೆ ನೀರು ಹರಿಯಿತು.

ನಗರದ ಪಿಡಿಎ ಎಂಜಿನಿಯರ್ ಕಾಲೇಜು ಸಮೀಪದ ರೈಲ್ವೆ ಸೇತುವೆ ಕೆಳಗೆ, ಹಳೆಯ ಜೇವರ್ಗಿ ರಸ್ತೆಯ ರೈಲ್ವೆ ಸೇತುವೆ‌ ಕೆಳಗೆ ಹಾಗೂ ಅನ್ನಪೂರ್ಣ ‌ಕ್ರಾಸ್ ಸಮೀಪದ ರಸ್ತೆಯಲ್ಲಿ ನೀರು‌ ನಿಂತು ವಾಹನಗಳ ಸವಾರರು ಪರದಾಡಿದರು.

ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಿಸಿಲು ನಾಡು‌ ಮಲೆನಾಡಿನಂತೆ‌ ಭಾಸವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.