ADVERTISEMENT

ಕಲಬುರ್ಗಿ: ‌ಸಂಪರ್ಕ ಕಡಿತ, ಹಳ್ಳದಲ್ಲಿ ಕೊಚ್ಚಿಹೋಗಿ ಎಇ ಸಿದ್ದರಾಮ ಅವಟೆ ಸಾವು

ಉಕ್ಕಿ ಹರಿದ ಕಾಗಿಣಾ ನದಿ, ಹಳ್ಳ: ಅಪಾರ ಪ್ರಮಾಣದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 5:31 IST
Last Updated 18 ಸೆಪ್ಟೆಂಬರ್ 2020, 5:31 IST
ಭಾರಿ ಮಳೆಯಿಂದಾಗಿ ನೀರಿನಿಂದ ಜಲಾವೃತವಾಗಿರುವ ಬಾಳೆ ತೋಟ
ಭಾರಿ ಮಳೆಯಿಂದಾಗಿ ನೀರಿನಿಂದ ಜಲಾವೃತವಾಗಿರುವ ಬಾಳೆ ತೋಟ   
""
""
""

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ‌ಬಳಿ ಹಳ್ಳ ತುಂಬಿ ಹರಿಯುತ್ತಿದ್ದು, ತೊಗರಿ, ಬಾಳೆ ಸೇರಿದಂತೆ ‌ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸಿದ್ದರಾಮ ಅವಟೆ

ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಎಇ ಸಿದ್ದರಾಮ ಅವಟೆ ಸಾವಿಗೀಡಾಗಿದ್ದಾರೆ.

ದಶಕದ ಮಹಾಮಳೆಗೆ ಜಿಲ್ಲೆ ಅಕ್ಷರಶಃ ‌ತತ್ತರಿಸಿ ಹೋಗಿದೆ. ಕಲಬುರ್ಗಿಯಿಂದ ಸೇಡಂ ಮೂಲಕ ತೆಲಂಗಾಣ ಸಂಪರ್ಕಿಸುವ ಮಳಖೇಡ ಸೇತುವೆ ಕಾಗಿಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಳುಗಿ ಹೋಗಿದೆ.

ADVERTISEMENT

ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿಯೂ ಕಾಗಿಣಾ ರೌದ್ರಾವತಾರ ತಾಳಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.