ಬಂಧನ
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ವಿಚ್ಛೇದನ ಹಾಗೂ ಜೀವನಾಂಶ ಕೊಡಿಸುವಂತೆ ಬಂದ ಕಕ್ಷಿದಾರ ಮಹಿಳೆ ಮೇಲೆ ಅವರ ಪರ ವಾದಿಸುತ್ತಿದ್ದ ವಕೀಲನೇ ಅತ್ಯಾಚಾರ ಎಸಗಿದ ಆರೋಪದಡಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ದೂರಿನನ್ವಯ 55 ವಯಸ್ಸಿನ ವಕೀಲ ಮಲ್ಲಿಕಾರ್ಜುನ ನರೋಣಿ ಅವರನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ 2019ರಲ್ಲಿ ಸೋದರ ಮಾವನನ್ನೇ ವರಿಸಿದ್ದರು. ವಿಚ್ಛೇದನ ಹಾಗೂ ಜೀವನಾಂಶ ಕೋರಿ 2021ರಲ್ಲಿ ಪ್ರಕರಣ ದಾಖಲಿಸಿದ್ದರು. ವಕೀಲ ನರೋಣಿ ಅವರಿಗೆ ಕೇಸ್ ನೀಡಿದ್ದರು.
‘ಪ್ರಕರಣ ಸಂಬಂಧ ಮಾತನಾಡುವುದಿದೆ ಎಂದು ಆಗಾಗ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.