ADVERTISEMENT

ಕಲಬುರಗಿ | ಆಸ್ಪತ್ರೆಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 6:21 IST
Last Updated 27 ಸೆಪ್ಟೆಂಬರ್ 2025, 6:21 IST
<div class="paragraphs"><p>ಶಿಶು (ಸಾಂದರ್ಭಿಕ ಚಿತ್ರ)</p></div>

ಶಿಶು (ಸಾಂದರ್ಭಿಕ ಚಿತ್ರ)

   

ಕಲಬುರಗಿ: ತಾಯಿಯೊಬ್ಬರು ನವಜಾತ ಗಂಡು ಮಗುವನ್ನು ಹೆರಿಗೆ ಕೊಠಡಿಯ ಬಾತ್‌ರೂಂನಲ್ಲೇ ಬಿಟ್ಟು ಪರಾರಿಯಾದ ಅಮಾನವೀಯ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದಿದೆ.

ಮಗು 1.50 ಕೆ.ಜಿಗಳಷ್ಟು ತೂಕ ಹೊಂದಿದ್ದು, ಸದ್ಯ ಮಗುವನ್ನು ಆಸ್ಪತ್ರೆಯ ಎನ್‌ಐಸಿಯು ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ADVERTISEMENT

‘ಸೆ.24ರಂದು ಸಂಜೆ 6.45ರ ಹೊತ್ತಿಗೆ ಮಹಿಳೆಯೊಬ್ಬರು ಆಸ್ಪತ್ರೆಯ ಹೆರಿಗೆ ಕೊಠಡಿಯ ಬಾತ್‌ರೂಂನಲ್ಲಿ ಹೆರಿಗೆ ಮಾಡಿಕೊಂಡು, ನವಜಾತ ಮಗುವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಹಸುಳೆಯ ಪೋಷಕರನ್ನು ಪತ್ತೆ ಮಾಡಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ.

ಈ ಕುರಿತು ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.