ಯಡ್ರಾಮಿ: ತಾಲ್ಲೂಕಿನ ತೆಲಗಬಾಳ ಗ್ರಾಮದಲ್ಲಿ ಮನೆಗಳಿಗೆ ಮತ್ತು ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದನ್ನು ಖಂಡಿಸಿ ಕಡಕೋಳ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ಯಡ್ರಾಮಿ: ಪಟ್ಟಣ ಸೇರಿ ತಾಲ್ಲೂಕಿನ ಇಜೇರಿ, ಹಂಗರಗಾ(ಕೆ), ಯತ್ನಾಳ, ವಡಗೇರಾ, ಕಡಕೋಳ, ತೆಲಗಬಾಳ, ಮಳ್ಳಿ ನಾಗರಹಳ್ಳಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಿಂದ ಹತ್ತಿ, ತೊಗರಿ, ಭತ್ತ ಸೇರಿ ಜನಜೀವನ ಅಸ್ತವ್ಯಸ್ತಯಾಗಿದೆ.
ಮಳ್ಳಿ ನಾಗರಹಳ್ಳಿ ರಸ್ತೆ ಉದ್ದಕ್ಕೂ ತಗ್ಗುಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಮತ್ತು ಹಳ್ಳಿದ ನೀರು ಸೇತುವೆ ಮೇಲೆ ಬಂದಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿತು.
ಕಡಕೋಳದಲ್ಲಿ ಸೇತುವೆ ಮೇಲೆ ನೀರು ಬಂದಿದ್ದರಿಂದ ಅಲ್ಲಿಯೂ ಸಂಚಾರ ಸ್ಥಗಿತಗೊಂಡಿತು. ಸುಂಬಡದಿಂದ ವಡಗೇರಾ ತೆರಳುವ ಸೇತುವೆ ಮೇಲೆ ನೀರು ಬಂದಿದ್ದರಿಂದ ಅಲ್ಲಿಯೂ ಸಂಚಾರ ಬಂದ್ ಆಗಿತು. ಇನ್ನೂ ಇಜೇರಿ ಗ್ರಾಮದಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದ್ದರಿಂದ ರಾತ್ರಿ ಪೂರ್ತಿ ಮಹಿಳೆಯರು ಮನೆಯಿಂದ ನೀರು ಹೊರ ಚಲ್ಲಿದರು. ಕೊಳಚೆ ನೀರು ಮನೆ ಹೊಕ್ಕಿದ್ದರಿಂದ ಇಡೀ ಮನೆಗಳು ದುರ್ವಾಸನೆಯಲ್ಲಿ ಜನ ಹೈರಾಣಾದರು.
ತೆಲಗಬಾಳ ಗ್ರಾಮದಲ್ಲಿ ಮಳೆ ನೀರು ಮನೆ ನುಗ್ಗಿದ್ದರಿಂದ ಜನರು ಸಂಕಷ್ಟ ಸಿಲುಕಿದ್ದರಿಂದ ಗ್ರಾಮಸ್ಥರು ಕಡಕೋಳ ಗ್ರಾಮ ಪಂಚಾಯಿತಿ ಮುಂದೆ ಧರಣಿ ಕುಳಿತರು.
ಹಂಗರಗಾ(ಕೆ) ಗ್ರಾಮದಲ್ಲಿ ಕೊಳವೆ ಬಾವಿಗಳು ಸೇರಿ 50 ಎಕರೆ ಬೆಳೆ ಹಾನಿಯಾಗಿದೆ ಎಂದು ಅಲ್ಲಿನ ರೈತ ವರ್ಗ ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಮಳೆಯಲ್ಲೇ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಡಾ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ಮೇಲೆ ಹಳ್ಳದಂತೆ ಹರಿಯುವ ನೀರಿನಿಂದ ವಾಹನ ಸಂಚಾರ ಸ್ಥಗಿತಗೊಂಡಿತು.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬಾರಿ ಮಳೆಯಿಂದ ಹಳ್ಳ ಕೊಳ್ಳಗಳು, ಕರೆಗಳು ಭರ್ತಿಯಾಗಿ ಜಮೀನಿನಲ್ಲಿ ಹಳ್ಳದಂತೆ ಮಳೆ ನೀರು ಹರಿದು ಹತ್ತಿ, ತೊಗರಿ, ಭತ್ತ ಸೇರಿ ವಿವಿಧ ಬೆಳೆಗಳು ಹಾನಿಯಾಗಿ ಮನೆಗಳಿಗೂ ನೀರು ನುಗ್ಗಿ ಜನರನ್ನು ಹೈರಾಣಾಗಿಸಿದೆ.
ತಾಲ್ಲೂಕಿನಲ್ಲಿ ಬಹುತೇಕ ಬೆಳೆಗಳು ಹಾನಿಯಾಗಿದ್ದು ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿ ಶಾಸಕ ಮೂಲಕ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.