ADVERTISEMENT

ಕಲಬುರ್ಗಿ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ ತರಾಟೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 6:15 IST
Last Updated 13 ಆಗಸ್ಟ್ 2020, 6:15 IST
ಕಲಬುರ್ಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ಡಾ.ಉಮೇಶ್ ಜಾಧವ್ ನೇತೃತ್ವದಲ್ಲಿ ದಿಶಾ‌ ಸಭೆ ಆರಂಭವಾಗಿದೆ. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ. ಇದ್ದರು.
ಕಲಬುರ್ಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ಡಾ.ಉಮೇಶ್ ಜಾಧವ್ ನೇತೃತ್ವದಲ್ಲಿ ದಿಶಾ‌ ಸಭೆ ಆರಂಭವಾಗಿದೆ. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ. ಇದ್ದರು.   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಕುಲಾಲಿ ರೈಲ್ವೆ ನಿಲ್ದಾಣದ ಕೆಳ ಸೇತುವೆ ನಿರ್ಮಾಣಕ್ಕಾಗಿ ರೈಲ್ವೆ ₹ 7.84 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಅದಕ್ಕೆ ಶೇ 2 ಮೊತ್ತವನ್ನು ಭರಿಸದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಸದ ಡಾ.ಉಮೇಶ ಜಾಧವ ತರಾಟೆಗೆ ತೆಗೆದುಕೊಂಡರು.

ಇಲಾಖೆ ಅಧಿಕಾರಿಗಳು ತಮ್ಮ ಪಾಲಿನ ₹ 15.67 ಲಕ್ಷದ ಪಾಲನ್ನು ಸಲ್ಲಿಸದ ಕಾರಣ ಹಣ ಬಿಡುಗಡೆ ಮಾಡಲು ಆಗಿಲ್ಲ ಎಂದು ರೈಲ್ವೆ ಇಲಾಖೆ ಎಂಜಿನಿಯರ್ ತಿಳಿಸಿದರು. ₹ 15 ಲಕ್ಷಕ್ಕಾಗಿ ಇಷ್ಟು ದಿನ ಕಾಮಗಾರಿ ಸ್ಥಗಿತಗೊಳಿಸಿದ್ದೀರಾ ಎಂದು ಲೋಕೋಪಯೋಗಿ ಇಲಾಖೆ ಅಫಜಲಪುರ ವಿಭಾಗದ ಸಹಾಯಕ ಎಂಜಿನಿಯರ್ ಗೆ ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಶರತ್ ಬಿ. ಹಣ ಇಲ್ಲದಿದ್ದರೆ ಹೇಳಿ ಇಂದೇ ಬಿಡುಗಡೆ ‌ಮಾಡುತ್ತೇವೆ. ತಕ್ಷಣ ಹಣ ಬಿಡುಗಡೆ ಮಾಡಿದ ಪತ್ರವನ್ನು ತಮಗೆ ಕಳಿಸಿಕೊಡಬೇಕು ಎಂದು ತಾಕೀತು ‌ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.