
ಕಾಳಗಿಯಲ್ಲಿ ಶನಿವಾರ ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ನೇತೃತ್ವದಲ್ಲಿ ರೈತರ ಸಭೆ ಜರುಗಿತು
ಕಾಳಗಿ: ಇಲ್ಲಿನ ನೀಲಕಂಠ ಕಾಳೇಶ್ವರ ದೇವಸ್ಥಾನದ ಮೈದಾನದಲ್ಲಿ ಪ್ರತಿ ಸೋಮವಾರ ನಡೆಸಲು ಉದ್ದೇಶಿಸಲಾದ ದನಗಳ ಸಂತೆ ವ್ಯವಸ್ಥಿತವಾಗಿ ನಡೆಯಲು ಶನಿವಾರ ಜಿ.ಪಂ. ಮಾಜಿ ಸದಸ್ಯ ರಾಜೇಶ ಗುತ್ತೇದಾರ ನೇತೃತ್ವದಲ್ಲಿ ಸಭೆ ಜರುಗಿತು.
ಸಭೆಯಲ್ಲಿ ದನಗಳಿಗೆ ಓಡಾಡಲು, ಕಟ್ಟಿಹಾಕಲು ತುರ್ತಾಗಿ ಮುರುಮ್ ಹಾಕಿ ನೆಲ ಹದಗೊಳಿಸಬೇಕು, ಗೂಟಗಳು ನೆಡಬೇಕು, ನೀರಿನ ವ್ಯವಸ್ಥೆ ಸೇರಿದಂತೆ ಮುಂದಿನ ದಿನಗಳಲ್ಲಿ ನೆರಳಿನ ವ್ಯವಸ್ಥೆ ಆಗಬೇಕು. ಒಟ್ಟಾರೆ ಪರಸ್ಥಳದಿಂದ ಸಂತೆಗೆ ಬರುವ ಯಾವುದೇ ಜಾನುವಾರು ಮತ್ತು ರೈತನಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬೇಕಾದ ವಿಚಾರಗಳ ನಿರ್ಣಯ ಕೈಗೊಳ್ಳಲಾಯಿತು.
ಈ ಎಲ್ಲ ವ್ಯವಸ್ಥೆ ಸರಿಯಾಗಿ ನೋಡಿಕೊಳ್ಳಲು 26 ಜನ ರೈತರ ಸಮಿತಿ ರಚಿಸಿ ಸಿದ್ರಾಮಪ್ಪ ಕಮಲಾಪುರ, ರಘು ಕದಂ (ಗೌರವಾಧ್ಯಕ್ಷರು), ವಿಶ್ವನಾಥ ವನಮಾಲಿ (ಅಧ್ಯಕ್ಷ), ಶರಣಪ್ಪ ಬೇಲೂರ (ಉಪಾಧ್ಯಕ್ಷ) ಮತ್ತು 5 ಜನರನ್ನು ಕುರಿಗಳ ವ್ಯವಸ್ಥೆಗೆ ನಿಯೋಜಿಸಲಾಯಿತು. ಪ್ರತಿವಾರ ಒಬ್ಬೊಬ್ಬ ರೈತ ಉಚಿತವಾಗಿ ಮೇವಿನ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ರೈತರಾದ ಶರಣಪ್ಪ ಮಳಗಿ, ನಾಗಣ್ಣಾ ಚಿತ್ತಾಪುರ, ಪಾಂಡುರಂಗ ರಾಜಾಪುರ, ದೇವಿಂದ್ರ ಹರಕಂಚಿ, ರಾಜು ರಾಸೂರ, ಸಂತೋಷ ಪತಂಗೆ, ಸಂತೋಷ ನರನಾಳ, ಪ್ರಕಾಶ ಯಲಾಲಕರ, ಸೇನಾಪತಿ ಕಡಬೂರ, ಮಹಾದೇವ ಡೋಂಗರೆ, ವೇದಪ್ರಕಾಶ ಮೋಟಗಿ, ವೀರಭದ್ರಪ್ಪ ಸಲಗೂರ, ಮೈಹಿಬೂಬೇಗ ಬಿಜಾಪುರ, ಶಿವಶರಣಪ್ಪ ದಿವಟಗಿ, ಸಂಗಪ್ಪ ಬಡಿಗೇರ, ಬಸವರಾಜ ಮಡಿವಾಳ, ನಾಗಯ್ಯ ಮಠಪತಿ, ಸಂತೋಷ ಕಡಬೂರ, ದತ್ತು ಗುತ್ತೇದಾರ, ಅಮೃತ ಪಾಟೀಲ, ಹೀರಲಾಲ ಸಾಬನೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.