ADVERTISEMENT

ಕಾಳಗಿ: ಭಕ್ತಿಭಾವದಿಂದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:18 IST
Last Updated 4 ಜುಲೈ 2025, 13:18 IST
ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದಲ್ಲಿ ಮೊಹರಂ ನಿಮಿತ್ತ ಭಕ್ತರು ಶುಕ್ರವಾರ ನೈವೇದ್ಯ ಅರ್ಪಿಸಿದರು
ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದಲ್ಲಿ ಮೊಹರಂ ನಿಮಿತ್ತ ಭಕ್ತರು ಶುಕ್ರವಾರ ನೈವೇದ್ಯ ಅರ್ಪಿಸಿದರು   

ಕಾಳಗಿ: ಭಾವೈಕ್ಯದ ಮೊಹರಂ ಹಬ್ಬ ತಾಲ್ಲೂಕಿನ ಎಲ್ಲೆಡೆ ಶುಕ್ರವಾರ (ಜೂನ್ 27) ಆರಂಭಗೊಂಡಿದ್ದು ಈ ನಿಮಿತ್ತ ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದಲ್ಲಿ ಭಕ್ತರು ಶುಕ್ರವಾರ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.

ಬೆಳಿಗ್ಗೆ ಹಲಗೆ, ತಾಶಾ ವಾದ್ಯ, ಯುವಕರ ಕುಣಿತದೊಂದಿಗೆ ಚಾಂದಶಹಾ ದರ್ವೇಶ ಮನೆಯಿಂದ ಪಂಜಿ ಹೊತ್ತ ಮುರ್ತುಜ್ ಶಹಾ ದರವೇಶ ಸವಾರಿ ತುಂಬಿ ಮೆರವಣಿಗೆಯಲ್ಲಿ ಸಾಗಿದರು.

ಮುಖ್ಯಬಜಾರ್, ಮುತ್ಯಾನಕಟ್ಟೆ, ಕುರುಬರಬಾವಿ, ಹನುಮಾನ ಮಂದಿರ, ಗೋಟೂರ ಅಗಸಿ ರಸ್ತೆ ಮಾರ್ಗವಾಗಿ ಮೆರವಣಿಗೆ ಜರುಗಿತು.

ADVERTISEMENT

ಕಾಳಗಿ, ಮಲಘಾಣ, ಡೊಣ್ಣೂರ ಮತ್ತಿತರ ಊರಿನ ಭಕ್ತರು ಇಡೀ ದಿನ ಶಹಾಹುಸೇನ ದರ್ಗಾ ಮತ್ತು ಕಾಸಿಂಸಾಬ ದರ್ಗಾಕ್ಕೆ ಕಾಲ್ನಡಿಗೆ, ಬೈಕ್, ಆಟೊ ಮೂಲಕ ತೆರಳಿ ಮಾಲದಿ, ಅನ್ನ, ಕಾಯಿ-ಕರ್ಪೂರ, ಲೋಬಾನ ಸಲ್ಲಿಸಿ ಪಂಜಿ ಮತ್ತು ಗೋರಿಗೆ ನಮಿಸಿ ಪ್ರಾರ್ಥಿಸಿದರು.

ಕೋರವಾರ, ಭರತನೂರ, ಚಿಂತಕುಂಟಾ, ನಾವದಗಿ, ಗೋಟೂರ, ಕೋಡ್ಲಿ, ರಟಕಲ್, ತೆಂಗಳಿ ಮತ್ತಿತರ ಗ್ರಾಮಗಳಲ್ಲಿ ಮೊಹರಂ ಅದ್ದೂರಿಯಿಂದ ನೆರವೇರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.