
ಕಲಬುರಗಿ: ‘ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರದೇ ಸಮರ್ಪಕ ಅನುದಾನ ಒದಗಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ದುಂಡು ಮೇಜಿನ ಸಭೆಯು ಒಕ್ಕೊರಲವಾಗಿ ಆಗ್ರಹಿಸಿದೆ.
ನಗರದ ಶರಣ ಬಸವ ವಿವಿಯ ಸಭಾಂಗಣದಲ್ಲಿ ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಚಿಂತಕ ಆರ್.ಕೆ.ಹುಡುಗಿ, ಕಿರಣ ದೇಶಮುಖ, ಬಸವರಾಜ ಕುಮ್ನೂರ, ಬಸವರಾಜ ಗುಲಶೆಟ್ಟ, ಸಂಗೀತಾ ಕಟ್ಟಿಮನಿ, ಕೈಲಾಶನಾಥ ದೀಕ್ಷಿತ್, ಬಿ.ಬಿ.ನಾಯಕ, ಗಾಂಧೀಜಿ ಮೋಳಕೇರೆ, ಸನಾಉಲ್ಲಾ, ಮಾಜೀದ್ ದಾಗಿ, ಸದಾನಂದ ಪೆರ್ಲ ಸೇರಿದಂತೆ ಅನೇಕರು ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಲ್ಲಬೇಕಾದ ಅಭಿವೃದ್ಧಿ ವಿಷಯಗಳು ಮಂಡಿಸಿದರು.
ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ಕಲಂ ಜಾರಿಯಂತೆ ಇಲ್ಲಿನ ಹಿಂದುಳಿವಿಕೆ ನಿವಾರಣೆಗೆ ಕಲ್ಯಾಣಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಕಲಬುರಗಿಗೆ ರೈಲೈ ವಿಭಾಗೀಯ ಕಚೇರಿ ಸ್ಥಾಪಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ಪಡೆದು ಅನುಷ್ಠಾನಗೊಳಿಸಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು. ಕಲ್ಯಾಣದಲ್ಲಿ ಐಐಟಿ ಸ್ಥಾಪಿಸಬೇಕು. ಬೀದರ್–ಕಲಬುರಗಿ–ವಿಜಯಪುರ ರಸ್ತೆ, ಬೀದರ್– ಶ್ರೀರಂಗಪಟ್ಟಣ ರಸ್ತೆ, ಆಳಂದ–ಲಾತೂರ್ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ಕಲಬುರಗಿ ವಿಮಾನಯಾನ ಸೇವೆ ಉಡಾನ್ ಸೌಲಭ್ಯ ಮುಂದುವರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ದುಂಡು ಮೇಜಿನ ಸಭೆ ಒತ್ತಾಯಿಸಿದೆ.
ಪ್ರಮುಖ ಮುಖಂಡರಾದ ರೌಫ ಖಾದ್ರಿ, ಅಸ್ಲಂ ಚೌಂಗೆ, ಸುಭಾಷ್ ಪಾಂಚಾಳ, ಖಾಜಿ ರಿಜ್ವಾನ್ ಸಿದ್ಧಿಕಿ, ಎಂ.ಬಿ.ನಿಂಗಪ್ಪ, ಸಂಧ್ಯಾರಾಜ, ಮುತ್ತಣ್ಣ ನಡಗೇರಿ, ಮೋಹನ ಕಟ್ಟಿಮನಿ, ಮಂಜೂರು ಡೆಕ್ಕನಿ, ಮಲ್ಲಪ್ಪ, ವಿನೋದ ಚವ್ಹಾಣ, ಶರಣಬಸಪ್ಪ, ಶ್ರಿಕಾಂತ ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.