ADVERTISEMENT

Karnataka Rains | ಕಲ್ಯಾಣ ಕರ್ನಾಟಕದ ವಿವಿಧೆಡೆ ಭಾರಿ ಮಳೆ: ಮುಳುಗಿದ ಸೇತುವೆಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 17:43 IST
Last Updated 12 ಆಗಸ್ಟ್ 2025, 17:43 IST
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದಣ್ಣೂರ–ಮದರಾ(ಬಿ) ಗ್ರಾಮಗಳ ನಡುವೆ ಅಮರ್ಜಾ ನದಿಗೆ ಕಟ್ಟಿರುವ ಸೇತುವೆ ಮಂಗಳವಾರ ಜಲಾವೃತಗೊಂಡಿದೆ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದಣ್ಣೂರ–ಮದರಾ(ಬಿ) ಗ್ರಾಮಗಳ ನಡುವೆ ಅಮರ್ಜಾ ನದಿಗೆ ಕಟ್ಟಿರುವ ಸೇತುವೆ ಮಂಗಳವಾರ ಜಲಾವೃತಗೊಂಡಿದೆ   

ಕಲಬುರಗಿ: ಕಲ್ಯಾಣ ಕರ್ನಾಟಕದ ವಿವಿಧೆಡೆ ಮಂಗಳವಾರ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಹಿರೇಹಳ್ಳ ತುಂಬಿ ಹರಿಯಿತು.

ರೈತ ಹನುಮಂತಪ್ಪ ಎತ್ತಿನ ಬಂಡಿ, ಟಗರುಗಳ ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ರೈತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಒಂದು ಎತ್ತು ಈಜಿ ದಡ ಸೇರಿದ್ದು, ಮತ್ತೊಂದು ಎತ್ತು, ಬಂಡಿ ಹಾಗೂ ನಾಲ್ಕು ಟಗರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಆರಂಭವಾದ ಮಳೆ ಬೆಳಗಿನ ತನಕ ಸುರಿದಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬಾದಲ್ಲಿ 112.5 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.

ADVERTISEMENT

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅಮರ್ಜಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ದಣ್ಣೂರ–ಮದರಾ(ಬಿ) ಸೇತುವೆ ಮುಳುಗಡೆಯಾಗಿದೆ.

ಚಿಂಚೋಳಿ ತಾಲ್ಲೂಕಿನ‌ ನಾಗರಾಳ ಜಲಾಶಯದಿಂದ 2,500 ಕ್ಯೂಸೆಕ್ ಮತ್ತು ಚಂದ್ರಂಪಳ್ಳಿ ಜಲಾಶಯದಿಂದ 2,405 ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಮುಲ್ಲಾಮಾರಿಯಲ್ಲಿ‌ ಮಂಗಳವಾರ ಪ್ರವಾಹ ಸ್ಥಿತಿ ಉಂಟಾಗಿತ್ತು. ಚಂದಾಪುರ, ಪೋಲಕಪಳ್ಳಿ, ಅಣವಾರ, ಭಕ್ತಂಪಳ್ಳಿ, ಬುರಗಪಳ್ಳಿ ಬಾಂದರು ಸೇತುವೆಗಳು ಮುಳುಗಿದ್ದವು.  

ಬೀದರ್‌, ಹುಮನಾಬಾದ್‌ನಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಹುಮನಾಬಾದ್‌ ತಾಲ್ಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.