ಕಮಲಾಪುರ: ಇಲ್ಲಿನ ಪ.ಪಂ ಚುನಾವಣೆ ಹಿನ್ನೆಲೆ ವಾರ್ಡ್‌ವಾರು ಮೀಸಲಾತಿ ಕರಡು ಸಿದ್ಧಪಡಿಸಲಾಗಿದೆ. ಜು 25ರಂದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮೀಸಲಾತಿ ಕರುಡು ಪ್ರತಿ ಪ್ರಕಟಗೊಳಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಪ್ರಕಟಗೊಳಿಸಿದ 7 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಕಾರಣ ಸಹಿತ, ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಕಮಲಾಪುರ, ಬೆಳಕೋಟಾ, ವಡಗೇರಾ, ಬಂಜಾರ ತಾಂಡಾ, ಬಸವನ ತಾಂಡಾ, ಚೌವಾಣ ತಾಂಡಾ, ಗಿರಿ ತಾಂಡಾ, ದೇವಲು ತಾಂಡಾ ಒಳಗೊಂಡ ಪ್ರದೇಶವನ್ನು ಕಳೆದ 2020 ರ ಜೂನ್ 5 ರಂದು ಕಮಲಾಪುರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಇದರನ್ವಯ ಕ್ಷೇತ್ರ ವಿಂಗಡಣೆ ಕೈಗೊಂಡು 2022 ಜನವರಿ ತಿಂಗಳಲ್ಲೇ 12 ವಾರ್ಡ್‌ಗಳಲ್ಲಿ ಕ್ಷೇತ್ರ ವಿಂಗಡಣೆ ಮಾಡಿ ಕರಡು ಪ್ರತಿ ಹೊರಡಿಸಲಾಗಿತ್ತು. ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿರಲಿಲ್ಲ. ಅಂತಿಮವಾಗಿ ಕಮಲಾಪುರ ಪಟ್ಟಣ ಪಂಚಾಯಿತಿ ಕ್ಷೇತ್ರ ಸೃಜಿಸಲಾಗಿತ್ತು. ಅದರಂತೆ ಸದ್ಯ ಚುನಾವಣೆ ಮೀಸಲಾತಿ ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.