
ಕಲಬುರಗಿ: ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಅನ್ವಯ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಶಾಸನ ರೂಪಿಸಿ ಸರ್ಕಾರ ಘೋಷಿಸಿದ್ದು ಸಂತೋಷ. ಆದರೆ ಅದು ಪ್ರತಿಶತ ಒಂದರಷ್ಟು ಕೂಡ ಕಾರ್ಯರೂಪಕ್ಕೆ ಬರದೇ ಇರುವುದು ಅತೀವ ನೋವು ಉಂಟು ಮಾಡಿದೆ’ ಎಂದು ಕನ್ನಡಪರ ಹೋರಾಟಗಾರ ಆನಂದ ಸಿದ್ಧಾಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,‘ಇದರ ಅನುಷ್ಠಾನದ ಹೊಣೆ ತಪ್ಪಿದವರಿಗೆ ಶಿಕ್ಷಿಸುವ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದರೆ ಒಳಿತು. ಕನ್ನಡ ನಾಮಫಲಕ ಹಾಕದೆ ಇರುವ ಅಂಗಡಿಗಳ ವಿರುದ್ಧ ಎಫ್‌ಐಆರ್ ಹಾಕುವ ಹಕ್ಕನ್ನು ಪೊಲೀಸ್ ಇಲಾಖೆಗೆ ವಹಿಸಬೇಕು. ಸರ್ಕಾರಗಳು ಕನ್ನಡಿಗರನ್ನು ಖುಷಿಪಡಿಸಲು ಕನ್ನಡ ಪರ ಕಾನೂನುಗಳನ್ನು ರಚಿಸದೇ ಕನ್ನಡದ ನಿಜವಾದ ಇಚ್ಛಾ ಶಕ್ತಿ ಹೊಂದಬೇಕು. ಆಗ ಮಾತ್ರ ಕನ್ನಡ ಉಳಿದು, ಬೆಳೆಯುತ್ತದೆ’ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.