ADVERTISEMENT

ಬೆನಕನಹಳ್ಳಿ ವಿರಕ್ತ ಮಠ: ಕರಿಬಸವ ಮಹಾಸ್ವಾಮಿ ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 4:13 IST
Last Updated 12 ಏಪ್ರಿಲ್ 2022, 4:13 IST
ಕರಿಬಸವ ಮಹಾಸ್ವಾಮಿ
ಕರಿಬಸವ ಮಹಾಸ್ವಾಮಿ   

ಸೇಡಂ: ತಾಲ್ಲೂಕಿನ ಬೆನಕನಹಳ್ಳಿ ವಿರಕ್ತ ಮಠದ ಕರಿಬಸವ ಸ್ವಾಮೀಜಿ (77) ಭಾನುವಾರ ತಡರಾತ್ರಿ ಲಿಂಗೈಕ್ಯರಾದರು.

ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮಿ ಮತ್ತು ದಿಗ್ಗಾಂವನ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿಮಠದ ಪರಂಪರೆಯಂತೆ ಹಾಗೂ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಕೇದಾರಲಿಂಗಯ್ಯ ದೇವರನ್ನು ಮುಂದಿನ ಪೀಠಾಧಿಕಾರಿಯಾಗಿ ನೇಮಕ ಮಾಡಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಗೌಡನಹಳ್ಳಿಯ ಪ್ರಕಾಶ ತಾತಾ, ಮಲಕೂಡ ಸ್ವಾಮೀಜಿ, ಗುಂಡಗುರ್ತಿ ಸ್ವಾಮೀಜಿ, ಮಲ್ಲಯ್ಯಸ್ವಾಮಿ, ಮುಖಂಡರಾದ ಶಿವಲಿಂಗರೆಡ್ಡಿ ಬೆನಕನಹಳ್ಳಿ, ಬಸವರಾಜ ಗೌಡ, ಶರಣಪ್ಪ ಕ್ಯಾತನಾಳ, ವಿಶ್ವನಾಥರೆಡ್ಡಿ, ರಾಚಯ್ಯಸ್ವಾಮಿ, ಪವನ ಕುಲಕರ್ಣಿ, ಲಿಂಗರಾಜ ಪೂಜಾರಿ, ಮಲ್ಲು ಹಂಗನಳ್ಳಿ, ದೇವಪ್ಪ ಜಾಡರ್, ನಾಗಪ್ಪ ಕಲಕಂಭ, ದೊಡ್ಡಪ್ಪ ರಾಮತೀರ್ಥ, ದೇವಿಂದ್ರಪ್ಪ ಆವಂಟಿ, ಮಲ್ಲಯ್ಯಸ್ವಾಮಿ‌ ಭೀಮಣ್ಣ ತಳವಾರ, ಶಿವರಾಜ ಕೋಳಕೂರ, ಭೀಮಣ್ಣ ವಾಲಿಕಾರ, ಚಂದ್ರಮ್ಮ ಜೋಗೇರ, ಹಣಮಂತ ಜೋಗೇರ ಸುಬ್ಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.