ADVERTISEMENT

ಕಲಬುರಗಿಯಲ್ಲಿ ಬಿರುಸಿನ ಮಳೆ: ರಸ್ತೆಗಳಲ್ಲಿ ನೀರು, ವಾಹನ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 7:27 IST
Last Updated 14 ಅಕ್ಟೋಬರ್ 2022, 7:27 IST
ಕಲಬುರಗಿ ನಗರದಲ್ಲಿ ಬಿರುಸಿನ ಮಳೆ ಸುರಿಯಿತು.
ಕಲಬುರಗಿ ನಗರದಲ್ಲಿ ಬಿರುಸಿನ ಮಳೆ ಸುರಿಯಿತು.   

ಕಲಬುರಗಿ: ನಗರದಲ್ಲಿ ಶುಕ್ರವಾರ ಬಿರುಸಿನ ಮಳೆ ಸುರಿಯಿತು.

ಬೆಳಿಗ್ಗೆಯಿಂದ ಸೆಖೆಯ ವಾತಾವರಣ ಇತ್ತು. ಜಿಟಿ ಜಿಟಿ ಆರಂಭವಾದ ಮಳೆ ಬಳಿಕ ಬಿರುಸು ಪಡೆದುಕೊಂಡಿತು.

ಇದರಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು. ವಾಹನ ಸಂಚಾರದಲ್ಲೂ ವ್ಯತ್ಯಯವುಂಟಾಯಿತು.

ADVERTISEMENT

ಆಳಂದ ನಾಕಾ, ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲ್ವೆ ಅಂಡರ್ ಪಾಸ್, ಹಳೆ ಜೇವರ್ಗಿ ರಸ್ತೆ ಹಾಗೂ ಸರ್ಕಾರಿ ಐಟಿಐ ಕಾಲೇಜಿನ ಆವರಣದಲ್ಲಿ ನೀರು ನಿಂತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.