ಅಫಜಲಪುರ (ಕಲಬುರಗಿ): ತಾಲ್ಲೂಕಿನಾದ್ಯಾಂತ ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಅಮರ್ಜಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತಾಲ್ಲೂಕಿನ ದಣ್ಣೂರ ಮತ್ತು ಮದರಾ ಬಿ. ಗ್ರಾಮಗಳ ನಡುವಣ ಸೇತುವೆ ಜಲಾವೃತಗೊಂಡಿದೆ.
ಈ ಸೇತುವೆ ಜಾಲಾವೃತಗೊಂಡಿದ್ದರಿಂದ ಗ್ರಾಮಸ್ಥರು, ರೈತರು, ನೌಕರರು, ಶಾಲಾ ಕಾಲೇಜಿನ ಮಕ್ಕಳು ತೊಂದರೆ ಅನುಭವಿಸಿದರು.
ಅಮರ್ಜಾ ನದಿಯು ಭೀಮಾ ನದಿಯ ಉಪನದಿ. ಗಾಣಗಾಪುರದ ಸಮೀಪದಲ್ಲಿ ಅಮರ್ಜಾ ನದಿಯು ಭೀಮಾ ನದಿಯನ್ನು ಸೇರುತ್ತದೆ. ಪ್ರತಿ ಮಳೆಗಾಲದಲ್ಲಿ ಮುಳುಗುವ ಈ ಸೇತುವೆಯನ್ನು ಎತ್ತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.