ADVERTISEMENT

ಕಲಬುರ್ಗಿ | ಬಾರದ ತಪಾಸಣಾ ವರದಿ: ವೈದ್ಯರೊಂದಿಗೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 7:47 IST
Last Updated 24 ಜುಲೈ 2020, 7:47 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಪ್ರಾತಿನಿಧಿಕ ಚಿತ್ರ   

ಕಲಬುರ್ಗಿ: ಕ್ವಾರಂಟೈನ್ ಅವಧಿ ಮುಗಿಸಿದರೂ ಅಂತಿಮ ತಪಾಸಣಾ ವರದಿ ಬಂದಿಲ್ಲ ‌ಎಂದು ನೆಪ ಹೇಳಿ ವೈದ್ಯರು ಬಿಡುಗಡೆ ಮಾಡುತ್ತಿಲ್ಲ ‌ಎಂದು ಹಲವು ಮಂದಿ ಆರೋಪಿಸಿದ್ದಾರೆ. ಇಲ್ಲಿನ ಕೆಸರಟಗಿ ಗ್ರಾಮದ ಬಳಿ ಇರುವ ಕ್ವಾರಂಟೈನ್ ‌ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ವೈದ್ಯರೊಂದಿಗೆ ವಾಗ್ವಾದ ನಡೆಸಿದರು.

ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿರುವ ಕೊರೊನಾ ಪಾಸಿಟಿವ್ ಬಂದ ಸೋಂಕಿತರು ಈ ಆರೋಪ ಮಾಡಿದ್ದಾರೆ.

ವರದಿ ನೀಡುವಲ್ಲಿ ‌ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಪ್ರಭಾವಿಗಳಿಗೆ ಅರ್ಧಗಂಟೆಯಲ್ಲೇ ತಪಾಸಣಾ ವರದಿ ನೀಡಿ ಬಿಡುಗಡೆ ಮಾಡುತ್ತಿದ್ದಾರೆ‌ ಎಂದೂ ‌ಹಲವರು ಆಕ್ಷೇಪಿಸಿದರು.

ADVERTISEMENT

ಗಂಟಲು ದ್ರವ ತೆಗೆದುಕೊಂಡು ವಾರ ಕಳೆದರೂ ಫಲಿತಾಂಶ ‌ಬಂದಿಲ್ಲ. ನಮ್ಮನ್ನು ಬಿಟ್ಟುಬಿಡಿ ಎಂಬ ಬೇಡಿಕೆಗೆ‌ ಮಣಿದ ವೈದ್ಯರು ಪಾಸಿಟಿವ್ ಬಂದರೆ ಮತ್ತೆ ಕ್ವಾರಂಟೈನ್ ‌ಕೇಂದ್ರಕ್ಕೆ ದಾಖಲಾಗಬೇಕು‌ ಎಂಬ ಷರತ್ತು ವಿಧಿಸಿ ಕೆಲವರನ್ನು ಬಿಡುಗಡೆ ‌ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.