ADVERTISEMENT

ಖಾಜಾ ಬಂದಾ ನವಾಜ್‌ ದರ್ಗಾಗೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 9:38 IST
Last Updated 22 ಜೂನ್ 2020, 9:38 IST
ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ
ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ   

ಕಲಬುರ್ಗಿ: ಇಲ್ಲಿನ ಐತಿಹಾಸಿಕ ಖಾಜಾ ಬಂದಾ ನವಾಜ್‌ ದರ್ಗಾಗೆ ಸೋಮವಾರದಿಂದ (ಜೂನ್‌ 22) ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ ಪ್ರವಾಸಿಗರು ಹಾಗೂ ಭಕ್ತರಿಗೆ ಸೂಫಿ ಸಂತರ ದರ್ಶನ ಸಿಗಲಿದೆ ಎಂದು ದರ್ಗಾದ ಮುಖ್ಯಸ್ಥ ಡಾ.ಸಯ್ಯದ್‌ ಶಾ ಖುಸ್ರೊ ಹಿಸೇನಿ ಸಜ್ಜಾದಾ ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ದರ್ಗಾ ಪ‍್ರವೇಶ ನಿಷೇಧಿಸಲಾಗಿತ್ತು. ಜೂನ್‌ 1ರಂದು ಲಾಕ್‌ಡೌನ್‌ ತೆರವುಗೊಂಡ ಮೇಲೂ ದರ್ಗಾ ಒಳಗೆ ಸಾರ್ವಜನಿಕರನ್ನು ಬಿಡಲಿಲ್ಲ. ವಾರ್ಷಿಕ ಪೂರ್ವಭಾವಿ ಉರುಸ್‌ ಕಾರ್ಯಕ್ರಮಗಳು ನಡೆಯುತ್ತಿದ್ದ ಕಾರಣ, ಅಂತರ ಕಾಯ್ದುಕೊಳ್ಳುವ ಸಲುವಾಗಿ ಇಲ್ಲಿಯವರೆಗೂ ಪ್ರವೇಶ ನಿರ್ಬಂಧಿಸಲಾಗಿತ್ತು ಎಂದು ಅವರು ’ಪ್ರಜಾವಾಣಿ‘ಗೆ ಪ್ರತಿಕ್ರಿಯೆ ನೀಡಿದರು.

ಪ್ರತಿ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಸಂಜೆ 4.30ರಿಂದ 7.30ರವರೆಗೆ ಮಾತ್ರ ಭೇಟಿ ನೀಡಬಹುದು. ಅಲ್ಲದೇ, 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರು ದರ್ಗಾಗೆ ಬರದಿರಲು ಮನವಿ ಮಾಡಲಾಗಿದೆ. ಮಾಸ್ಕ್‌ ಧರಿಸದೇ ಬರುವವರಿಗೆ ಪ್ರವೇಶ ನೀಡುವುದಿಲ್ಲ ಎಂದರು.

ADVERTISEMENT

ಕೊರೊನಾ ವೈರಾಣು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ನೀಡಿದ ಎಲ್ಲ ಮಾರ್ಗದರ್ಶನಗಳನ್ನೂ ದರ್ಗಾಗೆ ಬರುವವರು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್‌, ಸ್ಯಾನಿಟೈಸರ್‌, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.