ADVERTISEMENT

ವಕೀಲರ ದೇಶ ಸೇವೆ: ಹೆಮ್ಮೆಪಡುವ ಸಂಗತಿ: ಶಾಂತಲಾ ಆರ್ ದೊಡ್ಡೆವಾಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 10:05 IST
Last Updated 4 ಡಿಸೆಂಬರ್ 2021, 10:05 IST
ಅಫಜಲಪುರದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಾಂತಲ ಆರ್. ದೊಡ್ಡೆವಾಡ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಎಲ್. ಪಟೇಲ್ ಇದ್ದರು
ಅಫಜಲಪುರದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಾಂತಲ ಆರ್. ದೊಡ್ಡೆವಾಡ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಎಲ್. ಪಟೇಲ್ ಇದ್ದರು   

ಅಫಜಲಪುರ: ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಮುಕ್ಕಾಲು ಭಾಗ ಹೋರಾಟಗಾರರು ವಕೀಲರಾಗಿದ್ದು, ಅವರು ದೇಶಕ್ಕೆ ಸಲ್ಲಿಸಿರುವ ಸೇವೆಯು ನಾವೆಲ್ಲರು ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಾಂತಲಾ ಆರ್ ದೊಡ್ಡೆವಾಡ ಹೇಳಿದರು.

ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರ ಜಯಂತಿ ಸ್ಮರಣಾರ್ಥ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗವೂ ಸ್ವತಂತ್ರ ಅಂಗವಾಗಿದೆ. ಯಾರೇ ತಪ್ಪು ಮಾಡಿದರೂ ತಾರತಮ್ಯವಿಲ್ಲದೆ ಶಿಕ್ಷೆ ವಿಧಿಸಲಾಗುವುದು ಎಂದರು.

ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಅಶೋಕ ಟಿ. ಮಾತನಾಡಿ ಅಸಹಾಯಕರಿಗೆ ಯಾವುದೇ ಪ್ರತಿಫಲವಿಲ್ಲದೆ ಕೆಲಸ ಮಾಡಿಕೊಡಬೇಕು. ಸಮಾಜದಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದೆ. ವಕೀಲರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ADVERTISEMENT

ಹಿರಿಯ ನ್ಯಾಯವಾದಿಗಳಾದ ಶರದಕುಮಾರ ಪೂಜಾರಿ, ಕೆ.ಜಿ.ಪೂಜಾರಿ, ಫಿರೋಜ ಜಾಗಿರದಾರ, ಶಂಕರರಾವ ಹುಲ್ಲೂರ, ಡಿ.ಡಿ. ದೇಶಪಾಂಡೆ ಅವರುಗಳ ವಕೀಲರ ಸಂಘದಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದರು.

ವಕೀಲರ ಸಂಘದ ತಾಲ್ಲೂಕ ಅಧ್ಯಕ್ಷ ಎಮ್.ಎಲ್. ಪಟೇಲ್ ಬಳೂಂಡಗಿ, ಕಿರಿಯ ಸಹಾಯಕ ಅಭಿಯೋಜಕ ಸಂತೋಷ ಲೋಖಂಡೆ, ಸಂಘದ ಕಾರ್ಯದರ್ಶಿ ಎಂ.ಎಚ್. ಮಾಲಿಪಾಟೀಲ್, ನ್ಯಾಯವಾದಿಗಳಾದ ಎಸ್.ಎಸ್. ಪಾಟೀಲ್, ವೈ .ಎಸ್.ಸಾಲಿಮನಿ, ಎಫ್.ಎಂ. ಇನಾಂದಾರ, ಎಸ್.ಜಿ.ಗುತ್ತೇದಾರ, ಸುರೇಶ ಅವಟೆ, ಚಂದ್ರಶೇಖರ ಹಿರೇಮಠ, ಸುಧೀರ ಹತ್ತಿ, ಅನಿತಾ ದೊಡ್ಡಮನಿ, ಮೈಬೂಬಿ ಪಟೇಲ್, ಕೆ.ಡಿ.ಪಟೇಲ್, ಅರ್ಜುನ ಕೆರೂರ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.