ಕಲಬುರ್ಗಿ: ನಗರದಲ್ಲಿ ಸೋಮವಾರ ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್ ಸಭೆ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಮೇ 24ರಿಂದ ರಸ್ತೆ ಹಾಗೂ ಕಟ್ಟಡ ಕಾರ್ಮಿಕರ ಸಹಾಯ ಮಾಡಲು ಏಳು ವಾಹನಗಳನ್ನು ನೀಡಲಾಗಿತ್ತು. ಈ ವಾಹನಗಳು ಯಾವ ಕಡೆ ಸಂಚರಿಸಿವೆ ಹಾಗೂ ಖರ್ಚು– ವೆಚ್ಚ ಏನು. ನಿಜವಾಗಿ ಕಾರ್ಮಿಕರಿಗೆ ಉಪಯೋಗವಾಗುತ್ತಿವೆಯೇ ಎಂಬ ಬಗ್ಗೆ ಕೂಡ ತಿಳಿದುಕೊಳ್ಳಲಾಯಿತು.
ಜೂನ್ 7ರವರೆಗೆ ಉಚಿತ ಸೇವೆಯನ್ನು ಮುಂದುವರಿಸಲು ಅಸೋಸಿಯೇಷನ್‌ನ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.
ಕೆಕೆಆರ್‌ಡಿಬಿ, ಕೆಪಿಡಬ್ಲ್ಯೂಡಿ, ನೀರವಾವರಿ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಟೆಂಡರ್ ಬಗ್ಗೆ ಕೂಡ ಸದಸ್ಯರು ಚರ್ಚಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಮೋಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ, ಸರದಾರಯ್ಯ ಗುತ್ತೇದಾರ, ಸಲೀಮ್ ಅಟ್ಟೂರ್, ರಾಜಶೇಖರ ಪಾಟೀಲ್, ಮನ್ಸೂರ ತೊಂಚಿ, ಗುರುನಂಜಯ್ಯ ಸ್ವಾಮಿ, ಶಿವಾನಂದ ಪಾಟೀಲ, ರಾಜಶೇಖರ ಎಂಕಚಿ, ಮಡೆಪ್ಪ ಗುತ್ತೇದಾರ, ಚನ್ನಯ್ಯ ಮಠ, ಸಿರಾಜ್ ಪಟೇಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.