ADVERTISEMENT

ಕೃಷಿ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 13:15 IST
Last Updated 18 ಆಗಸ್ಟ್ 2022, 13:15 IST
ಕಲಬುರಗಿಯ ಕೃಷಿ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಡೀನ್ ಡಾ.ಎಂ.ಎಂ. ಧನೋಜಿ, ಡಾ. ರಾಜು ತೆಗ್ಗಳ್ಳಿ, ಡಾ. ಶಿಲ್ಪಾ ಉಪಳಾಂವಕರ್, ಡಾ. ಮಂಜುಳಾ ಕಟ್ಟಿಮನಿ ಇತರರು ಇದ್ದರು
ಕಲಬುರಗಿಯ ಕೃಷಿ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಡೀನ್ ಡಾ.ಎಂ.ಎಂ. ಧನೋಜಿ, ಡಾ. ರಾಜು ತೆಗ್ಗಳ್ಳಿ, ಡಾ. ಶಿಲ್ಪಾ ಉಪಳಾಂವಕರ್, ಡಾ. ಮಂಜುಳಾ ಕಟ್ಟಿಮನಿ ಇತರರು ಇದ್ದರು   

ಕಲಬುರಗಿ: ಇಲ್ಲಿನ ಆಳಂದ ರಸ್ತೆಯ ಕೃಷಿ ಕಾಲೇಜಿನಲ್ಲಿ ಇತ್ತೀಚೆಗೆ ಡಾ.ಎಸ್.ಆರ್. ರಂಗನಾಥನ್ ಅವರ 130ನೇ ಜನ್ಮದಿನದ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಕಾಲೇಜಿನ ಡೀನ್ ಡಾ.ಎಂ.ಎಂ. ಧನೋಜಿ ಮಾತನಾಡಿ, ‘ರಂಗನಾಥನ್ ಅವರು ಗಣಿತಶಾಸ್ತ್ರದಲ್ಲಿ ಪದವಿಯನ್ನು ಪಡೆದು ಗ್ರಂಥಾಲಯ ವರ್ಗೀಕರಣ ಮಾಡಿ ಓದುಗರಿಗೆ ತಮಗೆ ಬೇಕಾದ ವಿಷಯ ಗ್ರಂಥಗಳನ್ನು ಸರಳವಾಗಿ ಸಿಗುವಂತೆ ಮಾಡಿದರುಉ. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯವು ಜ್ಞಾನದ ಕೇಂದ್ರ, ಕಾಲೇಜಿನ ಹೃದಯ’ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗಳ್ಳಿ, ಝಡ್‌ಎಆರ್‌ಎಸ್‌ ಡಾ.ಬಿ.ಎಂ. ದೊಡ್ಡಮನಿ, ಸಹಾಯಕ ಗ್ರಂಥಪಾಲಕಿ ಡಾ.ಶಿಲ್ಪಾ ಉಪಳಾಂವಕರ್ ಅತಿಥಿಗಳನ್ನು ಸ್ವಾಗತಿಸಿದರು. ಗ್ರಂಥಾಲಯ ಸಹಾಯಕಿ ಡಾ.ಮಂಜುಳಾ ವಿ. ಕಟ್ಟಿಮನಿ ಪ್ರಾರ್ಥನಾ ಗೀತೆ ಹಾಡಿದರು. ಡಾ.ಡಿ.ಎಸ್. ವಗ್ಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ಏಕನಾಥ ರಾಠೋಡ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.