
ಚಿಂಚೋಳಿ: ಪಟ್ಟಣದಲ್ಲಿ ಎರಡು ಮದ್ಯದಂಗಡಿಗಳ ಕೀಲಿ ಮುರಿದ ಕಳ್ಳರು ₹ 2.11 ಲಕ್ಷದಷ್ಟು ನಗದು ಕದ್ದು ಪರಾರಿಯಾಗಿದ್ದಾರೆ.
ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಸ್.ಆರ್. ಪಾಟೀಲ ಮತ್ತು ಚಿಂಚೋಳಿಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಬಳಿಯ ನಾಗಯ್ಯ ಕೊಟ್ರಕಿ ಅವರಿಗೆ ಸೇರಿದ ಮದ್ಯದಂಗಡಿಯಲ್ಲಿ ನಸುಕಿನ ಜಾವ 1ರಿಂದ 2 ಗಂಟೆ ಸಮಯದಲ್ಲಿ ಕಳ್ಳತನ ನಡೆದಿದೆ.
ಶಟರ್ ಎತ್ತಿ ಒಳಗೆ ನುಗ್ಗಿದ ಕಳ್ಳರು ಬಸ್ ನಿಲ್ದಾಣದ ಪಕ್ಕದ ಅಂಗಡಿಯಿಂದ ₹ 1.30 ಲಕ್ಷ ಹಾಗೂ ಬ್ಯಾಂಕ್ ಬಳಿಯ ಅಂಗಡಿಯಿಂದ ₹ 81 ಸಾವಿರ ನಗದು ದೋಚಿದ್ದಾರೆ ಎಂದು ಅಂಗಡಿ ಮಾಲೀಕರು ಚಿಂಚೋಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
‘ಅಂಗಡಿಯೊಂದರ ಶಟರ್ ಎತ್ತಲು ನಾಲ್ವರು ಕಳ್ಳರು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೊಂದು ಅಂಗಡಿಯ ಸಿಸಿಟಿವಿ ದೃಶ್ಯಾವಳಿ ದಾಖಲಾಗುವ ಸಾಧನವನ್ನೂ ಕಳ್ಳರು ಕದ್ದುಕೊಂಡು ಹೋಗಿದ್ದಾರೆ’ ಎಂದು ಮೂಲಗಳು ಹೇಳಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ ಹಾಗೂ ಪಿಎಸ್‌ಐ ಗಂಗಮ್ಮ ಜಿನಿಕೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.