ADVERTISEMENT

ಲಾಕ್‌ಡೌನ್‌ ಸಂಕಷ್ಟ | ಜಮೀನಿನಲ್ಲೇ ಉಳಿದಿದೆ ಹೂಕೋಸು

ಶಿವಾನಂದ ಹಸರಗುಂಡಗಿ
Published 1 ಮೇ 2020, 22:57 IST
Last Updated 1 ಮೇ 2020, 22:57 IST
ಅಫಜಲಪುರದ ಮುಕ್ತುಮ್‌ಸಾಬ ಚೌಧರಿ ಅವರು ಬೆಳೆದಿರುವ ಹೂಕೋಸು ಬೆಳೆ ಕಟಾವಿಗೆ ಬಂದಿರುವುದು
ಅಫಜಲಪುರದ ಮುಕ್ತುಮ್‌ಸಾಬ ಚೌಧರಿ ಅವರು ಬೆಳೆದಿರುವ ಹೂಕೋಸು ಬೆಳೆ ಕಟಾವಿಗೆ ಬಂದಿರುವುದು   

ಅಫಜಲಪುರ (ಕಲಬುರ್ಗಿ ಜಿಲ್ಲೆ): ಇಲ್ಲಿಯ ರೈತಮುಕ್ತುಮ್‌ಸಾಬ ಚೌಧರಿ ಮೂರು ಎಕರೆಯಲ್ಲಿ ಹೂಕೋಸು ಬೆಳೆದಿದ್ದು, ಲಾಕ್‌ಡೌನ್‌ನಿಂದಾಗಿ ಮಾರಾಟವಾಗದೆ ಹಾಳಾಗುವ ಆತಂಕ ಎದುರಾಗಿದೆ.

‘10 ವರ್ಷಗಳಿಂದ ಹೂಕೋಸು ಬೆಳೆಯುತ್ತಿದ್ದೇನೆ. ಪ್ರತಿ ವರ್ಷ ಏಜೆನ್ಸಿಯವರು ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದರು. 50 ಹೂಕೋಸುಗಳಿಗೆ ₹500 ದರ ಸಿಗುತ್ತಿತ್ತು. ಎಕರೆಗೆ ₹1ಲಕ್ಷ ಆದಾಯ ಬರುತ್ತಿತ್ತು. ಆದರೆ,ಈಗ ಸ್ಥಳೀಯ ಮಾರುಕೊಟ್ಟೆಯಲ್ಲಿ ರೂಪಾಯಿಗೊಂದು ಕೊಡುವಂತೆ ಕೇಳುತ್ತಿದ್ದಾರೆ.ಎಕರೆಗೆ ₹ 50 ಸಾವಿರ ಖರ್ಚಾಗಿದ್ದು, ಹಾಕಿದ ಹಣ ಬಂದರೆ ಸಾಕು ಎಂಬಂತಾಗಿದೆ’ ಎಂದು ರೈತ ಅಳಲು ತೋಡಿಕೊಂಡರು.

‘ಬ್ಯಾಂಕ್‌ನಲ್ಲಿ ಬೆಳೆ ಸಾಲ ಪಡೆದಿದ್ದೇನೆ. ಸದ್ಯ ಕಟಾವು ಮಾಡಲೇ ಬೇಕು. ಅವಧಿ ಮೀರಿದರೆ ಯಾರೂ ಖರೀದಿಸುವುದಿಲ್ಲ. ನಾನು ಬೆಳೆದಿರುವ ಹೂಕೋಸುಗಳ ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂಬುದು ಅವರ ಒತ್ತಾಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.